alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಯಕಿ ಜಾನೆಟ್ ಜಾಕ್ಸನ್ ಗೆ ಹುಚ್ಚು ಅಭಿಮಾನಿ ನೀಡಿದ ಅತಿರೇಕದ ಗಿಫ್ಟೇನು ಗೊತ್ತಾ…?

ಲಾಸ್ ಎಂಜಲೀಸ್ : ಖ್ಯಾತ ಪಾಪ್ ಗಾಯಕಿ ಜಾನೆಟ್ ಜಾಕ್ಸನ್ ಯಾರಿಗೆ ತಾನೆ ಗೊತ್ತಿಲ್ಲ. ಜಾನೆಟ್ ತಮ್ಮ ಹುಚ್ಚು ಅಭಿಮಾನಿಯೊಬ್ಬನ ಅತಿರೇಕದ ಸಂದರ್ಭವೊಂದನ್ನು ಸಂದರ್ಶನವೊಂದರಲ್ಲಿ ತೆರೆದಿಟ್ಟಿದ್ದಾರೆ.

ಇತ್ತೀಚೆಗೆ ಬಿಗ್ ಬಾಯ್ ಟಿವಿ ನಡೆಸಿದ ಸಂದರ್ಶನದಲ್ಲಿ ಜಾನೆಟ್ ಗೆ ನಿಮ್ಮ ಅಭಿಮಾನಿಗಳಿಂದ ನಿಮಗೆ ಉಂಟಾದ ಕ್ರೇಜಿಯಸ್ಟ್ ವಿಷಯ ಯಾವುದು? ಎಂದು ಕೇಳಲಾಗಿತ್ತು. ಇದಕ್ಕೆ ಜಾನೆಟ್ ಹೇಳಿದ ಹುಚ್ಚು ಅಭಿಮಾನಿಯ ಕಥೆ ಎಲ್ಲರನ್ನು ದಂಗುಬಡಿಸುವಂತಿದೆ.

ಅಭಿಮಾನಿಯೊಬ್ಬರು ತನ್ನ ಜನನಾಂಗದ ಫೋಟೋದೊಂದಿಗೆ ಒಂದು ಡಬ್ಬದಲ್ಲಿ ವೀರ್ಯವನ್ನು ಕಳುಹಿಸಿಕೊಟ್ಟಿದ್ದರಂತೆ. ಜತೆಗೆ ಒಂದು ಪತ್ರವನ್ನು ಬರೆದಿದ್ದು ಇದರಿಂದಲೇ ನೀವು ಮಕ್ಕಳನ್ನು ಪಡೆಯಬೇಕು ಎಂದು ವಿನಂತಿಯನ್ನೂ ಮಾಡಿದ್ದ ಎಂಬ ಅಂಶವನ್ನು ಹಂಚಿಕೊಂಡಿದ್ದಾರೆ.

ಆದರೆ ನಾನು ವಿವಾಹವಾಗಿಯೇ ಮಗನನ್ನು ಪಡೆದುಕೊಂಡಿದ್ದೇನೆ ಎಂದು ತಿಳಿಸಿದ ಜಾನೆಟ್, 18 ತಿಂಗಳ ಹಿಸ್ಸಾ ಎಂಬ ಮಗನಿದ್ದಾನೆ. ವಿಸ್ಸಾಮ್ ಅಲ್ ಮನಾರೊಂದಿಗೆ ತಾವು ವಿವಾಹವಾಗಿದ್ದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...