alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಹಳಿ ಭಾಷೆಯಲ್ಲಿದ್ದ ರಾಜ್ಯಪಾಲರ ಪತ್ರ ವಾಪಸ್

letter

ಜಾಫ್ನಾ ಯೂನಿವರ್ಸಿಟಿ ಆರ್ಟ್ಸ್ ಫ್ಯಾಕಲ್ಟಿ ಸ್ಟೂಡೆಂಟ್ಸ್ ಯೂನಿಯನ್ ಅಧ್ಯಕ್ಷ ಕೆ. ರಾಜೀವನ್, ಉತ್ತರ ಪ್ರಾಂತ್ಯದ ರಾಜ್ಯಪಾಲ ರೆಜಿನೊಲ್ಡ್ ಕೂರೇ ಸಿಂಹಳಿ ಭಾಷೆಯಲ್ಲಿ ಬರೆದಿದ್ದ ಪತ್ರವನ್ನು ಹಿಂದಕ್ಕೆ ಕಳುಹಿಸಿದ್ದಾರೆ.

ಅಕ್ಟೋಬರ್ 20ರಂದು ಚೆಕ್ ಪಾಯಿಂಟ್ ನಲ್ಲಿ ಪೊಲೀಸರು ಸೂಚಿಸಿದರೂ ಬೈಕ್ ನಿಲ್ಲಿಸದೇ ಹೋದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲಾಗಿತ್ತು. ಈ ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಓರ್ವ ಗುಂಡು ತಗುಲಿ ಮೃತಪಟ್ಟರೆ ಇನ್ನಿಬ್ಬರು ಅಪಘಾತದಲ್ಲಿ ಸಾವಿಗೀಡಾಗಿದ್ದರು. ಘಟನೆಗೆ ಪೊಲೀಸರೇ ಹೊಣೆ ಅಂತಾ ವಿವಿ ಹಾಗೂ ವಿಪಕ್ಷಗಳು ಆರೋಪಿಸಿವೆ. ಈಗಾಗ್ಲೇ ಐವರು ಪೇದೆಗಳನ್ನು ಸಹ ಬಂಧಿಸಲಾಗಿದೆ.

ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ರಾಜ್ಯಪಾಲರು, ಲಂಕಾ ಮೈಥಿಪಾಲ ಸಿರಿಸೇನಾ ಅವರಿಗೆ ಬರೆದಿದ್ದ ಪತ್ರದ ಪ್ರತಿ ಇದು. ಇದಕ್ಕೂ ಮುನ್ನ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಜಾಫ್ನಾ ವಿವಿಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಗವರ್ನರ್ ಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದರು.

ಈ ಮೆಮೋರೆಂಡಮ್ ಇಂಗ್ಲಿಷ್, ತಮಿಳು ಮತ್ತು ಸಿಂಹಳೀ ಭಾಷೆಯಲ್ಲಿದೆ. ಆದ್ರೆ ರಾಜ್ಯಪಾಲರು ಬರೆದ ಪತ್ರ ಸಿಂಹಳಿ ಭಾಷೆಯಲ್ಲಿದೆ. ನೀವು ಪತ್ರದಲ್ಲಿ ಏನು ಬರೆದಿದ್ದೀರೆಂಬುದು ನಮಗೆ ಅರ್ಥವಾಗುತ್ತಿಲ್ಲ, ತಮಿಳು ಮತ್ತು ಸಿಂಹಳ ಶ್ರೀಲಂಕಾದ ರಾಷ್ಟ್ರೀಯ ಭಾಷೆಗಳು ಎಂದು ಉಲ್ಲೇಖಿಸಿ ರಾಜ್ಯಪಾಲರಿಗೆ ಪತ್ರ ವಾಪಸ್ ಕಳಿಸಲಾಗಿದೆ. ರಾಜ್ಯಪಾಲರು ಇಂಗ್ಲಿಷ್ ಪ್ರತಿಯನ್ನು ಲಗತ್ತಿಸಬೇಕಿತ್ತು ಎಂಬ ಅಭಿಪ್ರಾಯ ಕೇಳಿಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...