alex Certify
ಕನ್ನಡ ದುನಿಯಾ       Mobile App
       

Kannada Duniya

ಹೆರಿಗೆಯಾಗಿ 6 ವಾರಗಳ ನಂತ್ರ ಕೆಲಸಕ್ಕೆ ಮರಳಿದ ಪಿಎಂ

ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿ ಜಸಿಂದಾ ಅರ್ಡೆನಾ ಆರು ವಾರಗಳ ಮಾತೃತ್ವ ರಜೆ ನಂತ್ರ ಕೆಲಸಕ್ಕೆ ವಾಪಸ್ ಆಗಿದ್ದಾರೆ. ಜಸಿಂದಾ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಸೋಮವಾರ ಕ್ಯಾಬಿನೆಟ್ ಸಭೆಗೆ ಆಗಮಿಸಿದ ಜಸಿಂದಾ, ರಜೆ ವೇಳೆ ಸರ್ಕಾರ ನಡೆಸಿದ ಉಪಮುಖ್ಯಮಂತ್ರಿ ಹಾಗೂ ಇತರೆ ಮಂತ್ರಿಗಳಿಗೆ ಕೃತಜ್ಞನೆ ಸಲ್ಲಿಸಿದ್ರು.

ಆರು ವಾರ ತುಂಬಾ ಸುಂದರವಾಗಿತ್ತು. ಕೇವಲ ಮಗುವಿಗೆ ಜನ್ಮ ನೀಡಿದ ಖುಷಿಯೊಂದೇ ಅಲ್ಲ ಮಂತ್ರಿಮಂಡಳ ಹಾಗೂ ನ್ಯೂಜಿಲ್ಯಾಂಡ್ ಜನತೆ ನೀಡಿದ ಉಡುಗೊರೆ, ಶುಭಾಶಯ ಖುಷಿ ತಂದಿದೆ ಎಂದು ತಿಳಿಸಿದ್ರು. ಜೂನ್ 21 ರಂದು ಜಸಿಂದಾ ಆರೋಗ್ಯಕರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಜೂನ್ 24 ರಂದು ಆಸ್ಪತ್ರೆಯಿಂದ ಮನೆಗೆ ಬಂದಿದ್ದ ಜಸಿಂದಾ ಮಗಳಿಗೆ ನೆವೆ ಎಂದು ಹೆಸರಿಟ್ಟಿದ್ದಾರೆ. ನೆವೆ ಎಂದ್ರೆ ಮಂಜುಗಡ್ಡೆ ಅಥವಾ ಪ್ರಕಾಶಮಾನ ಎಂದರ್ಥವಂತೆ. ಮಗು ಜನನದ ನಂತ್ರ ಇದೇ ಮೊದಲ ಬಾರಿ ಸಾರ್ವಜನಿಕ ಭಾಷಣ ಮಾಡಿದ ಜಸಿಂದಾ, ಮಹಿಳೆಯರಿಗೆ ರಾಜಕೀಯಕ್ಕೆ ಬರಲು ಯಾಕೆ ಸಮಯವಿರುವುದಿಲ್ಲ ಎಂಬುದು ಈಗ ಗೊತ್ತಾಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...