alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳಿಲ್ಲದ ದಂಪತಿಗೆ ಇಲ್ಲಿದೆ ಗುಡ್ ನ್ಯೂಸ್….

ಮೆಲ್ಬರ್ನ್: ಮಕ್ಕಳಿಲ್ಲದವರಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ರಕ್ಷಿಸಿ ಇಡಲಾದ ಭ್ರೂಣದಿಂದಲೂ ಹೆಚ್ಚಿನ ಫಲವನ್ನು ಪಡೆಯಬಹುದಾಗಿದೆ ಎಂದು ಅಧ್ಯಯನವೊಂದು ಹೇಳಿದೆ. ಪ್ರನಾಳ ಪ್ರಕ್ರಿಯೆ ಇತ್ತೀಚೆಗೆ ಜನಪ್ರಿಯವಾಗುತ್ತಿದೆ.

ಆಡಿಲೇಡ್ ವಿಶ್ವವಿದ್ಯಾಲಯ ಹಾಗೂ ವಿಯೆಟ್ನಾಂ ವೈದ್ಯಕೀಯ, ಔಷಧ ವಿಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಪ್ರನಾಳ ಪ್ರಕ್ರಿಯೆಯಲ್ಲಿ ತಾಜಾ ಭ್ರೂಣವನ್ನು ಗರ್ಭಾಶಯಕ್ಕೆ ಸೇರಿಸಿದಾಗ ಬೆಳೆಯುವ ಸಾಧ್ಯತೆ ಇರುವಂತೆಯೇ ಶೀತ ವಾತಾವರಣದಲ್ಲಿ ರಕ್ಷಿಸಿ ಇಡಲಾದ ಭ್ರೂಣವನ್ನು ಗರ್ಭಾಶಯಕ್ಕೆ ಸೇರಿಸಿದಾಗಲೂ ಹೆಚ್ಚಿನ ಫಲ ಪಡೆಯಬಹುದಾಗಿದೆ ಎಂಬುದು ಗೊತ್ತಾಗಿದೆ.

ಶೀತಾವರಣದಲ್ಲಿ ರಕ್ಷಿಸಿ ಇಡಲಾದ ಭ್ರೂಣದಿಂದ ಮಗುವನ್ನು ಪಡೆಯಬಹುದಾಗಿದೆ. ಈ ವಿಧಾನದ ಮೂಲಕ ಮಗುವನ್ನು ಪಡೆಯಲು ಹೆಚ್ಚಿನವರು ಆಸಕ್ತರಾಗಿದ್ದಾರೆ. ಅಂತಹವರಿಗೆ ಈ ಸಂಶೋಧನೆಯಿಂದ ಅನುಕೂಲವಾಗಲಿದೆ ಎಂಬುದು ವಿಯೆಟ್ನಾಂ ವೈದ್ಯಕೀಯ ಹಾಗೂ ಔಷಧ ವಿಜ್ಞಾನ ವಿಶ್ವವಿದ್ಯಾಲಯದ ಲ್ಯಾನ್ ಎನ್. ವೂಂಗ್ ಅವರ ಅಭಿಪ್ರಾಯವಾಗಿದೆ.

ಬಂಜೆತನ ಅನುಭವಿಸುತ್ತಿದ್ದ 800 ಮಹಿಳೆಯರನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದ್ದು, ತಾಜಾ ಭ್ರೂಣವನ್ನು ಗರ್ಬಾಶಯಕ್ಕೆ ಸೇರಿಸಿದ ಶೇ. 35 ರಷ್ಟು ಮಹಿಳೆಯರು ಗರ್ಭ ಧರಿಸಿದ್ದಾರೆ. ಅದೇ ರೀತಿ ರಕ್ಷಿಸಿ ಇಡಲಾದ ಭ್ರೂಣವನ್ನು ಗರ್ಭಾಶಯಕ್ಕೆ ಸೇರಿಸಿದ ಶೇ 36 ರಷ್ಟು ಮಹಿಳೆಯರು ಗರ್ಭವನ್ನು ಧರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...