alex Certify
ಕನ್ನಡ ದುನಿಯಾ       Mobile App
       

Kannada Duniya

ಟಿವಿ ನೋಡಬೇಡಿ ವ್ಯಾಯಾಮ ಮಾಡಿ ಎಂದ ಚಾನೆಲ್

ITV will switch off ALL its channels for 1 hour this Saturday and this what they will be showingವೀಕ್ಷಕರನ್ನು ಸೆಳೆಯಲು ಟಿವಿ ಚಾನೆಲ್ ಗಳು ಕಸರತ್ತು ನಡೆಸುತ್ತಿರುವ ಮಧ್ಯೆ ದಿನಂಪ್ರತಿ ಟಿವಿ ಮುಂದೆ ಕೂತಿರುವ ವೀಕ್ಷಕರನ್ನು ಒಂದು ಟಿವಿ ಚಾನೆಲ್ ಎಚ್ಚರಿಸುವ ಮೂಲಕ ಅಚ್ಚರಿ ಮೂಡಿಸಿದೆ. ಬೆಳಗಿನಿಂದ ಸಂಜೆಯ ತನಕ ಟಿವಿ ಮುಂದೆ ಕುಳಿತು ಬೊಜ್ಜು ಬೆಳೆಸಿಕೊಳ್ಳುವ ಬದಲು ಸ್ವಲ್ಪ ಸಮಯವನ್ನು ದೈಹಿಕ ವ್ಯಾಯಾಮಕ್ಕಾಗಿ ಮೀಸಲಿಡಿ ಎಂದು ಲಂಡನ್ನಿನ ಟಿವಿ ಚಾನೆಲ್ ಹೇಳಿದೆ.

ಲಂಡನ್ನಿನ ಐಟಿವಿ ತನ್ನ ವೀಕ್ಷಕರಿಗೆ ಈ ಕಿವಿಮಾತು ಹೇಳಿದೆ. ಬರೀ ಬಾಯಿ ಮಾತಲ್ಲಿ ಹೇಳಿಲ್ಲ, ವೀಕ್ಷಕರು ಒಂದು ತಾಸು ವ್ಯಾಯಾಮ ಮಾಡಲೇಬೇಕೆಂದು ಟಿವಿ ತನ್ನೆಲ್ಲ ಚಾನೆಲ್ ಗಳನ್ನು ಒಂದು ಗಂಟೆಗಳ ಕಾಲ ಸ್ಥಗಿತಗೊಳಿಸಿದೆ.

ಐಟಿವಿ ಶನಿವಾರ ಬೆಳಿಗ್ಗೆ 9.30 ರಿಂದ ಒಂದು ತಾಸು ತನ್ನೆಲ್ಲ ಚಾನೆಲ್ ಗಳನ್ನು ಸ್ಥಗಿತಗೊಳಿಸಿತ್ತು. ದಿನದಲ್ಲಿ ಒಂದು ತಾಸಾದರೂ ದೈಹಿಕವಾಗಿ ಶರೀರವನ್ನು ದಂಡಿಸುವ ಆಟ ಮತ್ತು ವ್ಯಾಯಾಮದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಎಂದು ಐಟಿವಿ ಹೇಳಿದೆ. ಐಟಿವಿಯ ಈ ನಿರ್ಧಾರದಿಂದ ಕೆಲವರು ವ್ಯಾಯಾಮ ಮಾಡಿದರಾದರೂ ಇನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಐಟಿವಿಯನ್ನು ಲೇವಡಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...