alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಗೆ ನುಗ್ಗಿ ಮಜಾ ಉಡಾಯಿಸಿದ ಕರಡಿ

us-karadi

ಮನೆಯೊಳಗೆ ನುಗ್ಗಿದ ಕರಡಿಯೊಂದು ಮಜಾ ಉಡಾಯಿಸಿದ ಘಟನೆ ಅಮೆರಿಕದ ಕೊಲರಾಡೊದಲ್ಲಿ ನಡೆದಿದೆ.

ಬಾಗಿಲು ಹಾಕದ ಮನೆಯೊಳಗೆ ನುಗ್ಗಿದ ಕರಡಿ ಇಡೀ ಮನೆಯಲ್ಲಿ ಸುತ್ತಾಡಿದೆ. ಅಡುಗೆ ಮನೆಯೊಳಗೆ ನುಗ್ಗಿ ಸಿಕ್ಕಿದ್ದನ್ನೆಲ್ಲಾ ತಿಂದು ಮುಗಿಸಿದೆ. ಬೆಡ್ ರೂಂಗೂ ಹೋಗಿದೆ. ಹಾಲ್ ನಲ್ಲಿ ಇದ್ದ ಪಿಯಾನೊ ನುಡಿಸಿದೆ. ಇಡೀ ಮನೆಯಲ್ಲಿ ಸುತ್ತಾಡುತ್ತಾ ಕೆಲಕಾಲ ಸಂಭ್ರಮಿಸಿದೆ.

ಪಿಯಾನೊ ಬಳಿ ಬಂದು ಕರಡಿ ಮಜಾ ಮಾಡಿರುವ ಈ ದೃಶ್ಯಗಳೆಲ್ಲಾ ಮನೆಯಲ್ಲಿ ಅಳವಡಿಸಲಾಗಿದ್ದ ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಮನೆಗೆ ಬಂದ ಮಾಲೀಕರು ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದನ್ನು ಗಮನಿಸಿ ಕಳ್ಳರ ಕೃತ್ಯವಿರಬಹುದೆಂದು ಭಾವಿಸಿದ್ದು, ಸಿ.ಸಿ. ಕ್ಯಾಮೆರಾ ಪರಿಶೀಲಿಸಿದಾಗ, ಈ ಕ್ರೇಜಿ ಕರಡಿಯ ಕೃತ್ಯ ಗಮನಕ್ಕೆ ಬಂದಿದೆ. ಜಾಲತಾಣಗಳಲ್ಲಿ ಕರಡಿಯ ಸಂಭ್ರಮ ವೈರಲ್ ಆಗಿದ್ದು, ಅಪಾರ ಸಂಖ್ಯೆಯ ಮಂದಿ ವೀಕ್ಷಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...