alex Certify
ಕನ್ನಡ ದುನಿಯಾ       Mobile App
       

Kannada Duniya

ಕೋರ್ಟ್ ಮೆಟ್ಟಿಲೇರಿದೆ ದಂಪತಿ ಮಗುವಿಗಿಟ್ಟ ಹೆಸರು…!

ಇಟಲಿ ಕೋರ್ಟ್ ಒಂದು ಮಗುವಿನ ಹೆಸರು ಬದಲಿಸುವಂತೆ ಪಾಲಕರಿಗೆ ಸೂಚನೆ ನೀಡಿದೆ. ಪಾಲಕರು 18 ತಿಂಗಳ ಮಗುವಿನ ಹೆಸರನ್ನು ಬದಲಾಯಿಸದೇ ಹೋದಲ್ಲಿ ತಾನೇ ಹೆಸರು ಬದಲಿಸುವುದಾಗಿ ಕೋರ್ಟ್ ಹೇಳಿದೆ. ಕೋರ್ಟ್ ಆದೇಶಕ್ಕೆ ನಿರಾಸೆ ವ್ಯಕ್ತಪಡಿಸಿರುವ ದಂಪತಿ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ.

ಇಟಲಿಯ ಮಿಲಾನ್ ದಂಪತಿ 18 ತಿಂಗಳ ಹೆಣ್ಣು ಮಗುವಿಗೆ ಬ್ಲ್ಯೂ ಎಂದು ಹೆಸರಿಟ್ಟಿದ್ದಾರೆ. ಈ ಹೆಸರು ಈಗ ವಿವಾದಕ್ಕೆ ಕಾರಣವಾಗಿದೆ. ಬ್ಲ್ಯೂ ಇಂಗ್ಲೀಷ್ ಪದ ಎಂದಿರುವ ಇಟಲಿ ಕೋರ್ಟ್, ಬ್ಯ್ಲೂ ಹೆಣ್ಣಿಗೆ ಸಂಬಂಧಿಸಿದ್ದು ಎಂಬುದಕ್ಕೆ ಯಾವುದೇ ಆಧಾರವಿಲ್ಲ ಎಂದಿದೆ.

ಕೋರ್ಟ್ ನಲ್ಲಿ ವಿಚಾರಣೆ ಮುಂದುವರೆದಿದೆ. ಕೋರ್ಟ್ ಅಂತಿಮ ತೀರ್ಪು ಬರುವವರೆಗೂ ಜನನ ದಾಖಲೆಯಲ್ಲಿ ಬೇರೆ ಹೆಸರನ್ನು ಬಳಸಿ ಎಂದು ಕೋರ್ಟ್ ಹೇಳಿದೆ. ಕೋರ್ಟ್ ತೀರ್ಪನ್ನು ದಂಪತಿ ಪ್ರಶ್ನಿಸಿದ್ದಾರೆ. 2016ರಲ್ಲಿ 6 ಮಕ್ಕಳಿಗೆ ಹಾಗೂ 2015ರಲ್ಲಿ 5 ಮಕ್ಕಳಿಗೆ ಬ್ಲ್ಯೂ ಎಂದು ಹೆಸರಿಡಲಾಗಿದೆ. ಆದ್ರೆ ನಮ್ಮ ಮಗುವಿನ ಹೆಸರನ್ನೇ ಪ್ರಶ್ನೆ ಮಾಡಿದ್ದು ಏಕೆ? ಜನನ ದಾಖಲೆಯಿಂದ ಹಿಡಿದು ಪಾಸ್ ಪೋರ್ಟ್ ನಲ್ಲಿ ಕೂಡ ಬ್ಲ್ಯೂ ಎಂಬ ಹೆಸರಿದೆ. ಇದನ್ನು ಬದಲಾಯಿಸುವುದು ಕಷ್ಟವೆಂದು ದಂಪತಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...