alex Certify
ಕನ್ನಡ ದುನಿಯಾ       Mobile App
       

Kannada Duniya

ಯುದ್ಧ ಸ್ಮಾರಕದ ಮುಂದೆ ಬೆತ್ತಲಾದ ಪ್ರವಾಸಿಗರು…!

ಇಟಲಿಯ ಪ್ರಸಿದ್ಧ ಯುದ್ಧ ಸ್ಮಾರಕಕ್ಕೆ ಅವಮಾನ ಮಾಡಿದ ಹಿನ್ನಲೆಯಲ್ಲಿ ಇಟಲಿಯ ಪೊಲೀಸರು ಇಬ್ಬರು ಬ್ರಿಟನ್ ನಾಗರಿಕರಿಗೆ ಹುಡುಕಾಟ ಶುರುಮಾಡಿದ್ದಾರೆ. ಇಟಲಿಯ ಸ್ಥಳೀಯ ಮಾಧ್ಯಮವೊಂದರ ವಿಡಿಯೋ ಜರ್ನಲಿಸ್ಟ್ ಸೆರೆ ಹಿಡಿದಿರುವ ವಿಡಿಯೋದಲ್ಲಿ ಇಬ್ಬರು ಬ್ರಿಟನ್ ನ ಯುವಕರು ಯುದ್ಧ ಸ್ಮಾರಕದ ಕಾರಂಜಿಯಲ್ಲಿ ಸ್ನಾನ ಮಾಡಿದ್ದಾರೆ. ಇಷ್ಟೇ ಅಲ್ಲ. ಕಾರಂಜಿಯ ನಡುವೆ ನಗ್ನರಾಗಿ ಫೋಸ್ ಕೊಟ್ಟು ಸ್ಮಾರಕಕ್ಕೆ ಅವಮಾನ ಮಾಡಿದ್ದಾರೆ.

ವೃತ್ತಾಕಾರದಲ್ಲಿರುವ ಕಾರಂಜಿಯ ಒಳಗೆ ಹೊಕ್ಕಿರುವವರನ್ನು ಬ್ರಿಟನ್ ಪ್ರವಾಸಿಗರು ಅಂತ ಗುರುತಿಸಲಾಗಿದೆ. ಕಾರಂಜಿಯ ಮಧ್ಯೆ ನಿಂತು ಸ್ನಾನ ಮಾಡಿದ ಪ್ರವಾಸಿಗರು ಆನಂತರದಲ್ಲಿ ಕಾರಂಜಿಯಲ್ಲಿ ನಿಂತು ಅಸಹ್ಯಕರ ಭಂಗಿಯಲ್ಲಿ ಫೊಟೋಗಳನ್ನ ತೆಗೆಸಿಕೊಳ್ತಾರೆ. ನಂತರದಲ್ಲಿ ಒಬ್ಬ ಪ್ರವಾಸಿ ತನ್ನ ಒಳವಸ್ತ್ರವನ್ನ ತೆಗೆದು ನಗ್ನವಾಗಿ ಫೊಟೋ ತೆಗೆಸಿಕೊಂಡಿದ್ದಾನೆ. ಪ್ರವಾಸಿಗರಿಗೆ ಗೈಡ್ ಆಗಿದ್ದ ವ್ಯಕ್ತಿಯೇ ಈ ಫೋಟೋಗಳನ್ನ ತೆಗೆದಿದ್ದಾನೆ.

ನಂತರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಲಾಗಿದೆ. ವಿಡಿಯೋ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಸುಮಾರು 40 ಸಾವಿರ ಮಂದಿ ನೋಡಿದ್ದಾರೆ. ಇಟಲಿ ಪೊಲೀಸರು ಈ ಇಬ್ಬರು ಪ್ರವಾಸಿಗರ ಫೋಟೋಗಳನ್ನ ಎಲ್ಲ ಕಡೆ ಸಾರ್ವಜನಿಕರು ಗಮನಕ್ಕೆ ಬರುವಂತೆ ಕ್ರಮ ಕೈಗೊಂಡಿದ್ದು ಪ್ರವಾಸಿಗರ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...