alex Certify
ಕನ್ನಡ ದುನಿಯಾ       Mobile App
       

Kannada Duniya

ನಿರಂತರವಾಗಿ ಏರ್ತಿದ್ದ ತೂಕಕ್ಕೆ ಕಾರಣ ಕೇಳಿ ದಂಗಾದ ಮಹಿಳೆ

ವಾಷಿಂಗ್ಟನ್ ನ ಕ್ಲಯಾ ರಾಣಾಗೆ ಹೊಟ್ಟೆ ನೋವು ಕಾಡ್ತಿತ್ತು. ಉರಿಯೂತದ ಜೊತೆಗೆ ಉಸಿರಾಟಕ್ಕೂ ತೊಂದರೆಯಾಗ್ತಿತ್ತು.ತೂಕ ಕೂಡ ವಿಪರೀತ ಏರುತ್ತಿತ್ತು. ತೂಕ ಇಳಿಸಿಕೊಳ್ಳೋದು ಅಸಾಧ್ಯವಾಗಿತ್ತು. ತೂಕ,ಹೊಟ್ಟೆ ಏರುತ್ತಿದ್ದಂತೆ ಆಕೆ ಗರ್ಭಿಣಿ ಎಂದು ಕುಟುಂಬಸ್ಥರು ಆರೈಕೆ ಮಾಡಲು ಶುರು ಮಾಡಿದ್ದರು.

ಆಕೆ ಕೂಡ ಅವಳಿ ಮಕ್ಕಳು ಹೊಟ್ಟೆಯಲ್ಲಿವೆ ಎಂದುಕೊಂಡಿದ್ದಳು. ಆದ್ರೆ ಪರೀಕ್ಷೆ ವೇಳೆ ಭಯಾನಕ ಸತ್ಯ ಹೊರಬಿತ್ತು. ಕ್ಲಯಾ ಹೊಟ್ಟೆಯಲ್ಲಿ ಮಕ್ಕಳಿರಲಿಲ್ಲ. ಒಂದು ರೀತಿಯ ಗಡ್ಡೆ ಹೊಟ್ಟೆಯಲ್ಲಿ ಬೆಳೆದಿತ್ತು. ಇದು ದೇಹದ ಇತರ ಭಾಗಗಳನ್ನು ದುರ್ಬಲಗೊಳಿಸಿ ಮಾರಣಾಂತಿಕವಾಗ್ತಿತ್ತು.

ಮೇ ತಿಂಗಳಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು 25 ಕೆ.ಜಿ. ತೂಕದ ಗಡ್ಡೆಯನ್ನು ಹೊಟ್ಟೆಯಿಂದ ಹೊರಗೆ ತೆಗೆದಿದ್ದಾರೆ.ಶಸ್ತ್ರಚಿಕಿತ್ಸೆ ನಂತ್ರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಆಕೆ ತೂಕ 75 ಪೌಂಡ್ ನಷ್ಟು ಇಳಿಕೆಯಾಗಿದೆ.ಚಿಕಿತ್ಸೆ ಸುಲಭವಾಗಿರಲಿಲ್ಲ. ಶಸ್ತ್ರಚಿಕಿತ್ಸೆ ವೇಳೆ ತುಂಬಾ ನೋವುಣ್ಣಬೇಕಾಯ್ತು ಎಂದು ಕ್ಲಯಾ ಹೇಳಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...