alex Certify
ಕನ್ನಡ ದುನಿಯಾ       Mobile App
       

Kannada Duniya

30 ಸೆಕೆಂಡ್ ಗಳಲ್ಲಿ ಕಳ್ಳರು ಮಾಡಿದ್ದಾರೆ ಇಂಥಾ ಕೆಲಸ

truck

ಫ್ಲೋರಿಡಾದಲ್ಲಿ ಖತರ್ನಾಕ್ ಕಳ್ಳರು ಕೇವಲ 30 ಸೆಕೆಂಡ್ ಗಳಲ್ಲಿ ದುಷ್ಕೃತ್ಯವೊಂದನ್ನು ನಡೆಸಿದ್ದಾರೆ. ಟೊಯೋಟಾ ಟಕೋಮಾ ಟ್ರಂಕ್ ಒಂದನ್ನು ಅಂಗಡಿಯೊಳಕ್ಕೆ ನುಗ್ಗಿಸಿ, ಅಲ್ಲಿದ್ದ ಗನ್ ಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಇದೊಂದು ಪಕ್ಕಾ ಯೋಜಿತ ಕೃತ್ಯ. ಟ್ರಕ್ ಅನ್ನು ನುಗ್ಗಿಸಿದ ರಭಸಕ್ಕೆ ಗನ್ ಮಳಿಗೆಗೆ ಹಾನಿಯಾಗಿದೆ. ಎಷ್ಟು ಗನ್ ಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ ಅನ್ನೋದು ಕೂಡ ಇನ್ನೂ ಲೆಕ್ಕ ಸಿಕ್ಕಿಲ್ಲ. ಕಳವು ಮಾಡಿ ಅಲ್ಲಿಂದ ಹೊರಟ ದುಷ್ಕರ್ಮಿಗಳು, ಕಳ್ಳತನಕ್ಕೆ ಬಳಸಿದ್ದ ಟ್ರಕ್ ಅನ್ನು 2 ಮೈಲು ದೂರದಲ್ಲಿ ಸುಟ್ಟು ಹಾಕಿದ್ದಾರೆ.

ಕಳ್ಳತನ ನಡೆದು ಒಂದು ಗಂಟೆಯ ನಂತರ ಪ್ರಕರಣ ಪೊಲೀಸರ ಗಮನಕ್ಕೆ ಬಂದಿದೆ. ಯಾವ ಉದ್ದೇಶಕ್ಕಾಗಿ ಗನ್ ಗಳನ್ನು ಕಳವು ಮಾಡಿದ್ದಾರೆ ಅನ್ನೋದು ಸ್ಪಷ್ಟವಾಗಿಲ್ಲ. ಬೆಳಗಿನ ಜಾವ 2.15 ರ ವೇಳೆಗೆ ಈ ಕೃತ್ಯ ನಡೆದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...