alex Certify
ಕನ್ನಡ ದುನಿಯಾ       Mobile App
       

Kannada Duniya

ಪುರುಷ-ಮಹಿಳೆಯರಿಗೆ ಇಲ್ಲಿ ಸಿಗಲಿದೆ ಸಮಾನ ವೇತನ

2018ನೇ ವರ್ಷಕ್ಕೆ ಭರ್ಜರಿ ಆರಂಭವೇ ಸಿಕ್ಕಿದೆ. ಐಸ್ ಲ್ಯಾಂಡ್ ನಲ್ಲಿ ಮಹಿಳೆಯರ ಹಕ್ಕುಗಳಿಗೆ ಗೆಲುವು ಸಿಕ್ಕಿದೆ. ಪುರುಷರಿಗೆ ಮಹಿಳೆಯರಿಗಿಂತ ಹೆಚ್ಚು ವೇತನ ಪಾವತಿಸುವ ನಿಯಮವನ್ನು ಕಾನೂನುಬಾಹಿರಗೊಳಿಸಿದೆ. ಈ ನಿಯಮ ಜಾರಿಗೆ ತಂದ ಮೊದಲ ರಾಷ್ಟ್ರ ಐಸ್ ಲ್ಯಾಂಡ್.

ಕಳೆದ ವರ್ಷ ಪ್ರಸ್ತಾಪಿಸಿದ್ದ ಈ ಕಾನೂನು ಜನವರಿ 1ರಿಂದ ಜಾರಿಗೆ ಬಂದಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಸಮಾನ ವೇತನ ದೊರೆಯಲಿದೆ. ಇನ್ನು ಮುಂದೆ ಕನಿಷ್ಠ 25 ನೌಕರರನ್ನು ನೇಮಕ ಮಾಡಿಕೊಳ್ಳುವ ಕಂಪನಿಗಳು ಮತ್ತು ಸರ್ಕಾರಿ ಏಜೆನ್ಸಿಗಳು, ಸರ್ಕಾರದ ಸಮಾನ ವೇತನ ನೀತಿಯ ಪ್ರಮಾಣಪತ್ರ ಪಡೆಯಬೇಕು.

ಪ್ರಮಾಣಪತ್ರ ಪಡೆಯದೇ ಇದ್ದಲ್ಲಿ ದಂಡ ವಿಧಿಸಲಾಗುತ್ತದೆ. ಕಳೆದ 9 ವರ್ಷಗಳಿಂದ ಆರ್ಥಿಕತೆ, ಶಿಕ್ಷಣ, ಆರೋಗ್ಯ ಮತ್ತು ರಾಜಕೀಯದಲ್ಲಿ ಲಿಂಗ ಸಮಾನತೆ ಕಾಯ್ದುಕೊಂಡ ರಾಷ್ಟ್ರಗಳಲ್ಲಿ ಐಸ್ ಲ್ಯಾಂಡ್ ಅಗ್ರಸ್ಥಾನದಲ್ಲಿದೆ. ಮೀಸಲಾತಿ ಇಲ್ಲದೇ ಶೇ.48ರಷ್ಟು ಮಹಿಳೆಯರು ಸಂಸತ್ ಪ್ರವೇಶಿಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...