alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಕೆಗಳಿಗೂ ಬೇಕು ಯೋಗಾಸನ….

goat-2

ಯೋಗ ಹುಟ್ಟಿಕೊಂಡಿದ್ದು ಭಾರತದಲ್ಲಿ. ಆದ್ರೆ ಈಗ ವಿಶ್ವದಾದ್ಯಂತ ಪಸರಿಸಿದೆ. ಸದ್ಯ ಅಮೆರಿಕದಲ್ಲಿ ಮಾತ್ರ ಮೇಕೆ ಯೋಗ ಸಿಕ್ಕಾಪಟ್ಟೆ ಜನಪ್ರಿಯವಾಗ್ತಿದೆ. ನೈಜೀರಿಯಾದ ಡ್ವಾರ್ಫ್ ಜಾತಿಯ ಮೇಕೆಗಳು ಪ್ರತಿದಿನ ತಪ್ಪದೇ ಯೋಗ ಕ್ಲಾಸ್ ಗೆ ಹಾಜರಾಗ್ತಿವೆ.

8_1495620854_725x725

ನ್ಯೂ ಹ್ಯಾಂಪ್ ಶೈರ್ ನಲ್ಲಿ ಪೀಟರ್ ಎಂಬುವವರಿಗೆ ಸೇರಿದ 5 ಎಕರೆ ಹೊಲವಿದೆ. ಅಲ್ಲಿ ಕೃಷಿ ಜೊತೆಗೆ ಪೀಟರ್ ಮೇಕೆಗಳನ್ನು ಕೂಡ ಸಾಕಿದ್ದಾರೆ. ಕಟ್ಟಡದ ಒಂದು ಕೋಣೆಯಲ್ಲಿ ಪೀಟರ್ ಯೋಗ ತರಗತಿಗಳನ್ನು ನಡೆಸ್ತಾರೆ.

ಅಲ್ಲಿ ಯೋಗ ಕಲಿಯಲು ಬರುವ 8 ವಿದ್ಯಾರ್ಥಿಗಳಿಗೆ ಮೇಕೆಗಳು ಕೂಡ ಸಾಥ್ ನೀಡುತ್ತವೆ. ಕೆಲವೊಂದು ಆಸನ ಮಾಡುವಾಗಲೆಲ್ಲ ವಿದ್ಯಾರ್ಥಿಗಳ ಮೈಮೇಲೆ ಹತ್ತಿ ನಿಂತುಬಿಡುತ್ತವೆ. ಈ ಮೇಕೆಗಳೆಲ್ಲ ನಾಯಿ ಗಾತ್ರದಷ್ಟಿವೆ.

goat-1

ಸಾಮಾಜಿಕ ತಾಣಗಳಲ್ಲಿ ಗೋಟ್ ಯೋಗದ ವಿಡಿಯೋಗಳನ್ನು ನೋಡಿದ್ದ ಪೀಟರ್ ಗೆ ತಾವೂ ಇದನ್ನೊಮ್ಮೆ ಪ್ರಯತ್ನಿಸೋಣ ಎನಿಸಿತ್ತು. ಮುದ್ದಾಗಿ ಸಾಕಿದ ಮೇಕೆಗಳಿಗೆ ಯೋಗ ಕಲಿಸೋಣ ಎಂದ್ಕೊಂಡ ಪೀಟರ್ ಈ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ.

goat-3

ಮೇಕೆಗಳು ಯೋಗ ಕ್ಲಾಸ್ ಗೆ ಬರೋದ್ರಿಂದ ವಿದ್ಯಾರ್ಥಿಗಳಲ್ಲಿ ಉತ್ಸಾಹ ಹೆಚ್ಚಿದೆಯಂತೆ. ತರಗತಿಯಲ್ಲಿ ಉಲ್ಲಾಸದಾಯಕ ವಾತಾವರಣ ನಿರ್ಮಾಣವಾಗಿದ್ಯಂತೆ. ಇಲ್ಲಿ ಯೋಗ ಕಲಿಯುವ ಪ್ರತಿ ವಿದ್ಯಾರ್ಥಿಯಿಂದ 22 ಡಾಲರ್ ಶುಲ್ಕ ಪಡೆಯಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...