alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಫೆಯಲ್ಲಿ ಸಿಂಹದ ಜೊತೆ ಮಗುವಿನ ಆಟ…!

ಭಾರತದ ರೆಸ್ಟೋರೆಂಟ್ ಹಾಗೂ ಕೆಫೆಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಆಫರ್ ಗಳನ್ನು ನೀಡಲಾಗುತ್ತದೆ. ಒಂದಕ್ಕೆ ಒಂದು ಉಚಿತ, ಶೇಕಡಾ 50ರಷ್ಟು ರಿಯಾಯಿತಿ ಸೇರಿದಂತೆ ಅನೇಕ ಆಫರ್ ನೀಡಲಾಗುತ್ತದೆ. ಆದ್ರೆ ಇಸ್ತಾಂಬುಲ್ ನ ರೆಸ್ಟೋರೆಂಟ್ ಜನರನ್ನು ಆಕರ್ಷಿಸಲು ಕಂಡುಕೊಂಡಿರುವ ಉಪಾಯ ಆಶ್ಚರ್ಯ ಹುಟ್ಟಿಸುವಂತಿದೆ.

ಇಸ್ತಾಂಬುಲ್ ನ ಮೆವಜು ಹೆಸರಿನ ಐಷಾರಾಮಿ ಕೆಫೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಉತ್ತಮ ಆಹಾರದ ಜೊತೆ ಸಿಂಹವೊಂದನ್ನು ಇಡಲಾಗಿದೆ. ಯಸ್, ಗ್ಲಾಸ್ ಹಿಂದೆ ಇರುವ ಸಿಂಹ ಗ್ರಾಹಕರನ್ನು ಸೆಳೆಯುತ್ತಿದೆ. ಗ್ರಾಹಕರು ಆಹಾರ ಸೇವನೆ ಜೊತೆಗೆ ಸಿಂಹದ ಜೊತೆ ಆಟವಾಡಬಹುದು.

ಸಾಮಾಜಿಕ ಜಾಲತಾಣದಲ್ಲಿ ಬಾಲಕಿ ಹಾಗೂ ಸಿಂಹದ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋದಲ್ಲಿ ಬಾಲಕಿ ಸಿಂಹದ ಜೊತೆ ಆಟವಾಡ್ತಿದ್ದಾಳೆ. ಸಿಂಹವೊಂದೇ ಅಲ್ಲ ಕೆಫೆ ಕಾಡು ಪ್ರಾಣಿಗಳ ಪುನರ್ವಸತಿ ಕೇಂದ್ರವೆಂದು ಸಿಬ್ಬಂದಿ ಹೇಳಿದ್ದಾರೆ. ಗಾಜಿನ ಗೋಡೆ ಹಿಂದೆ ಎರಡು ಮೊಸಳೆ, 35 ಮೊಲ, ನಾಲ್ಕು ಹಾವು, ನಾಲ್ಕು ಕುದುರೆ, ಎರಡು ಗಿಳಿ ಸೇರಿದಂತೆ ಅನೇಕ ಪ್ರಾಣಿಗಳಿವೆ. ಪ್ರಾಣಿ ಪ್ರಿಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಾಣಿ ಹಿಂಸೆ ಮಾಡ್ತಿರುವ ಈ ಕೆಫೆ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...