alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾಲಕಿ ಹೇರ್ ಸ್ಟೈಲ್ ನೋಡಿದ್ರೆ ದಂಗಾಗ್ತೀರಾ

ಉದ್ದದ, ದಟ್ಟವಾದ, ಕಪ್ಪು ಕೂದಲು ಅನೇಕರ ಕನಸು. ಹೇರಳವಾದ ಉದ್ದದ ಕೂದಲು ಬೇಕೆಂದು ಅನೇಕರು ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳ ಮೊರೆ ಹೋದ್ರೆ ಮತ್ತೆ ಕೆಲವರು ಬ್ಯೂಟಿ ಪಾರ್ಲರ್ ಅಲೆಯುತ್ತಾರೆ. ಎಷ್ಟು ಪ್ರಯತ್ನಪಟ್ಟರೂ ಫಲಿತಾಂಶ ಶೂನ್ಯ ಎನ್ನುವವರಿದ್ದಾರೆ. ಈ ಎಲ್ಲರ ಮಧ್ಯೆ ಐದು ವರ್ಷದ ಬಾಲಕಿಯೊಬ್ಬಳ ಕೂದಲು ಎಲ್ಲರ ಗಮನ ಸೆಳೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ವಿವಿಧ ಹೇರ್ ಸ್ಟೈಲ್ ವೈರಲ್ ಆಗಿದೆ. ಇಸ್ರೇಲ್ ನ ಟೆಲ್ ಅವಿವ್ ನಿವಾಸಿ ಮಿಯಾ ಅಫಲಾಲೋ ಉದ್ದದ ಹಾಗೂ ಹೇರಳ ಕೂದಲು ಹೊಂದಿದ್ದಾಳೆ. ಆಕೆ ಹೇರ್ ಸ್ಟೈಲ್ ಗೆ ಅನೇಕರು ಬೋಲ್ಡ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕೆ ಫಾಲೋವರ್ಸ್ ಸಂಖ್ಯೆ ಹೆಚ್ಚಾಗ್ತಿದೆ.

ಇಷ್ಟು ಸಣ್ಣ ಬಾಲಕಿಗೆ ಇಷ್ಟು ಉದ್ದದ ಕೂದಲಿದ್ಯಾ ಎಂದು ಕೆಲವರು ಪ್ರಶ್ನೆ ಮಾಡ್ತಿದ್ದಾರೆ. ಮುಂದೆ ಮಾಡೆಲ್ ಆಗೋದು ನಿಶ್ಚಿತ ಎನ್ನುತ್ತಿದ್ದಾರೆ ಕೆಲವರು. ಇಸ್ರೇಲ್ ನ ಪ್ರಸಿದ್ಧ ಕೇಶ ವಿನ್ಯಾಸಕ Sagi Dahary ಜೊತೆಗಿರುವ ಮಿಯಾ, ಅವ್ರ ಕೈನಲ್ಲಿಯೇ ಅನೇಕ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...