alex Certify
ಕನ್ನಡ ದುನಿಯಾ       Mobile App
       

Kannada Duniya

“ಸ್ತನ ಬೆಳವಣಿಗೆಯಾದ್ರೆ ರೇಪ್, ಅಪ್ರಾಪ್ತ ಹುಡುಗಿಯರಿಗೆ ಸೆರೆವಾಸ’’

ಭಯೋತ್ಪಾದನಾ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನ ಕಾಡಿನಿಂದ ತಪ್ಪಿಸಿಕೊಂಡು ಬಂದ ಯಜದಿ ಹುಡುಗಿಯೊಬ್ಬಳು ಹೇಳಿದ ಕಥೆ ಮೈ ನಡುಗಿಸುವಂತಿದೆ. ಹುಡುಗಿಯರನ್ನು ಅಪಹರಿಸಿಕೊಂಡು ಹೋಗುವ ಭಯೋತ್ಪಾದಕರು ಹುಡುಗಿಯರಿಗೆ ಗೋಡೆಗೆ ವಿರುದ್ಧವಾಗಿ ನಿಲ್ಲುವಂತೆ ಹೇಳುತ್ತಾರಂತೆ. ನಂತ್ರ ಸ್ತನ ವಿಕಾಸವಾಗಿದೆಯಾ ಎಂಬುದನ್ನು ಪರೀಕ್ಷೆ ಮಾಡ್ತಾರಂತೆ.

ಅಪಹರಿಸಿದ ಹುಡುಗಿಯರ ಸ್ತನ ಬೆಳವಣಿಗೆಯಾಗಿರದಿದ್ದಲ್ಲಿ ಅವರನ್ನು ತಮ್ಮ ಸೆರೆವಾಸಕ್ಕೆ ಕಳುಹಿಸುತ್ತಾರಂತೆ. ಸ್ತನ ಬೆಳವಣಿಗೆಯಾದ ಹುಡುಗಿಯರನ್ನು ರೇಪ್ ಮಾಡ್ತಾರಂತೆ. ಸೆರೆಮನೆ ಸೇರಿರುವ ಹುಡುಗಿ ದೊಡ್ಡವಳಾದ ಮೇಲೆ ಈಕೆಗೂ ಇದೇ ಶಿಕ್ಷೆ ನಿಶ್ಚಿತವಂತೆ. ಒಂದೇ ಕೋಣೆಯಲ್ಲಿ ಬೇರೆ ಬೇರೆ ಹುಡುಗಿಯರನ್ನು ಭಯೋತ್ಪಾದಕರು ರೇಪ್ ಮಾಡ್ತಾರಂತೆ. ಒಂದು ವೇಳೆ ಹುಡುಗಿ ಓಡಿ ಹೋಗಲು ಯತ್ನಿಸಿದ್ರೆ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತದೆಯಂತೆ.

ಹೆನ್ರಿ ಜಾಕ್ಸನ್ ಸೊಸೈಟಿಯ ನಿಕಿತಾ ಮಲಿಕ್ ”ಟ್ರಾಫಿಕಿಂಗ್ ಟೆರರ್” ಹೆಸರಿನ ಶೋಧಪತ್ರವೊಂದರಲ್ಲಿ ಈ ಹುಡುಗಿಯ ಕಥೆಯನ್ನು ಜಗತ್ತಿನ ಮುಂದಿಟ್ಟಿದ್ದಾರೆ. ಭಯೋತ್ಪಾದಕರಿಂದ ತಪ್ಪಿಸಿಕೊಂಡು ಬಂದ ಹುಡುಗಿ ಗರ್ಭಿಣಿಯಾಗಿದ್ದಳಂತೆ. ಮೆಟ್ಟಿಲಿನಿಂದ ಬಿದ್ದು ಗರ್ಭಪಾತಕ್ಕೆ ಆಕೆ ಯತ್ನಿಸಿದ್ದಳಂತೆ. ಹುಡುಗಿಯರನ್ನು ಅತ್ಯಾಚಾರ ಮಾಡುವ ಭಯೋತ್ಪಾದಕರು ನಮ್ಮ ಕಾನೂನನ್ನು ನಾವು ಅನುಸರಿಸುತ್ತೇವೆ ಎನ್ನುತ್ತಾರಂತೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...