
ಐಸಿಸ್ ಬಾಲ ಉಗ್ರರಿಗೆ ತರಬೇತಿ ನೀಡ್ತಾ ಇದೆ. ತರಬೇತಿ ವೇಳೆ ಮಕ್ಕಳು ನಿಜವಾದ ಖೈದಿಗಳನ್ನು ಅಟ್ಟಾಡಿಸಿ ಕೊಲ್ಲುವ ವಿಡಿಯೋ ಸೆರೆಯಾಗಿದೆ.
ಸಿರಿಯಾದ ಪ್ರತ್ಯೇಕ ಕಟ್ಟಡವೊಂದರಲ್ಲಿ 9-13 ವರ್ಷದ ಮಕ್ಕಳಿಗೆ ಹ್ಯಾಂಡ್ ಗನ್ ಕೊಟ್ಟು ಐಸಿಸ್ ಇಂತಹ ಉಗ್ರ ತರಬೇತಿ ನೀಡುತ್ತಿದೆ. ‘ಮೈ ಫಾದರ್ ಟೋಲ್ಡ್ ಮಿ’ ಹೆಸರಿನ 34 ನಿಮಿಷದ ವಿಡಿಯೋ ಇದು.
ಐಸಿಸ್ ಹಿಡಿತದಲ್ಲಿರುವ ರಖ್ಖಾನಲ್ಲಿ ತಡರಾತ್ರಿ ಸೇನೆಯನ್ನು ಸೆದೆಬಡಿಯಲು ಮಕ್ಕಳಿಗೆ ರಾಕೆಟ್ ಲಾಂಚರ್ ಗಳನ್ನು ಬಳಸುವುದು ಹೇಗೆ ಅನ್ನೋದನ್ನು ಕೂಡ ಕಲಿಸಿಕೊಡಲಾಗ್ತಿದೆ. ವಿಡಿಯೋದಲ್ಲಿ ಒಬ್ಬ ಬಾಲಕ ಖೈದಿಯ ತಲೆಗೆ ಗುಂಡಿಕ್ಕಿ ಸಾಯಿಸುವ ಮುನ್ನ ಕಾಲಿಗೂ ಗುಂಡು ಹಾರಿಸ್ತಾನೆ.
ಇನ್ನೊಬ್ಬನನ್ನು ಟೆರೆಸ್ ಮೇಲೆ ಅಟ್ಟಾಡಿಸಿಕೊಂಡು ಹೋದಾಗ ಅವನೇ ಕೆಳಕ್ಕೆ ಜಿಗಿದು ಪ್ರಾಣ ಬಿಡ್ತಾನೆ. ಕೆಲವು ದೃಶ್ಯಗಳಲ್ಲಿ ಮಷಿನ್ ಗನ್ ಹಾಗೂ ಮಾರ್ಷಲ್ ಆರ್ಟ್ಸ್ ಬಳಕೆಯ ದೃಶ್ಯವಿದ್ರೆ, ಉಳಿದ ದೃಶ್ಯಗಳಲ್ಲಿ ಜಿಹಾದಿಗಳ ಮಂತ್ರ ಪಠಣವಿದೆ. ಈ ಹಿಂದೆ ಮಕ್ಕಳಿಂದ ಖೈದಿಗಳ ಹಿಂಭಾಗಕ್ಕೆ ಗುಂಡು ಹಾರಿಸಿ ಸಾಯಿಸಲಾಗ್ತಿತ್ತು. ಆದ್ರೆ ಈಗ ಅವರನ್ನೆಲ್ಲ ಐಸಿಸ್ ಕಮಾಂಡರ್ ಮಾಡುವ ದುರುದ್ದೇಶ ಹೊಂದಿರುವ ಉಗ್ರಪಡೆ ಇಂತಹ ಹೇಯ ಕೃತ್ಯಕ್ಕೆ ಮುಂದಾಗಿದೆ.