alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರು ಮೂಲದ ಪಾದ್ರಿಯನ್ನು ಶಿಲುಬೆಗೇರಿಸ್ತಾರಂತೆ ಐಸಿಸ್ ಉಗ್ರರು

441465-isis-tom

ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಐಸಿಸ್ ಉಗ್ರರು ಮಾರ್ಚ್ 4 ರಂದು ಯೆಮನ್ ನಲ್ಲಿ ಅಪಹರಿಸಿರುವ ಕ್ರೈಸ್ತ ಪಾದ್ರಿ ಬೆಂಗಳೂರು ಮೂಲದವರು ಎಂಬುದು ಖಚಿತವಾಗಿದ್ದು, ಗುಡ್ ಫ್ರೈಡೇ ದಿನವಾದ ಇಂದು ಅವರನ್ನು ಶಿಲುಬೆಗೇರಿಸಿ ತಮ್ಮ ಕ್ರೌರ್ಯ ಪ್ರದರ್ಶಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

ಹೌದು. ಅಪಹೃತ ಟಾಮ್ ಉಳುನ್ನಲಿಲ್ ಈ ಹಿಂದೆ ಬೆಂಗಳೂರಿನ ಡಾನ್ ಬಾಸ್ಕೋ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ತದನಂತರ ಯೆಮೆನ್‍ ಗೆ ತೆರಳಿದ್ದರು. ಮಾರ್ಚ್ 4 ರಂದು ಅಲ್ಲಿನ ವೃದ್ಧಾಶ್ರಮದಿಂದ ಟಾಮ್ ಉಳುನ್ನಲಿಲ್ ಅವರನ್ನು ಅಪಹರಿಸಿದ್ದ ಐಸಿಸ್ ಉಗ್ರರು, ಗುಡ್ ಫ್ರೈಡೇ ದಿನದಂದು ಅವರನ್ನು ಶಿಲುಬೆಗೇರಿಸುವ ಮೂಲಕ ಕ್ರೈಸ್ತರಿಗೆ ಕಠಿಣ ಸಂದೇಶ ರವಾನಿಸಲಿದ್ದಾರೆ ಎಂದು ಕೆಲವು ವಿದೇಶಿ ಮಾಧ್ಯಮಗಳು ಪ್ರಕಟಿಸಿದ್ದು, ಆಘಾತ ಮೂಡಿಸಿದೆ.

ಈ ಕುರಿತಾಗಿ ಐಸಿಸ್ ಉಗ್ರರು ಯಾವುದೇ ಮಾಹಿತಿ ನೀಡದಿದ್ದರೂ ಸಹ ಕೆಲವೊಂದು ಕ್ರೈಸ್ತ ಮಿಷನರಿಗಳ ಹೇಳಿಕೆಯನ್ನು ಆಧರಿಸಿ ವಿದೇಶಿ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...