alex Certify
ಕನ್ನಡ ದುನಿಯಾ       Mobile App
       

Kannada Duniya

ಗುಲಾಮಿ ಪದ್ಧತಿ ಹೆಸರಲ್ಲಿ ಐಸಿಸ್ ನಿಂದ ನಿತ್ಯವೂ ರೇಪ್

is 13

ತಮ್ಮ ಕರಾಳ ಕೃತ್ಯಗಳ ಮೂಲಕ ವಿಶ್ವದ ನೆಮ್ಮದಿಗೆ ಭಂಗ ತಂದಿರುವ ಐಸಿಸ್ ಉಗ್ರರ ಮತ್ತೊಂದು ಕರಾಳ ಮುಖ ಬೆಳಕಿಗೆ ಬಂದಿದೆ. ವಯಸ್ಸಿನ ಬೇಧವಿಲ್ಲದೇ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಐಸಿಸ್ ಉಗ್ರರು ಬಲವಂತವಾಗಿ ಗರ್ಭ ನಿರೋಧಕ ಮಾತ್ರೆ ನುಂಗಿಸುತ್ತಿದ್ದಾರೆ.

ಧಾರ್ಮಿಕ ಅಲ್ಪಸಂಖ್ಯಾತರಾದ ಯೆಜ್ಡಿ ಸಮುದಾಯದ ಬಾಲಕಿಯರು, ಯುವತಿಯರು, ಹೆಂಗಸರನ್ನು ಕರೆತಂದು ಅವರ ಮೇಲೆ ನಿತ್ಯವೂ ಲೈಂಗಿಕ ದೌರ್ಜನ್ಯ ನಡೆಸುತ್ತಾರೆ. ಚಿಕ್ಕಚಿಕ್ಕ ಕೊಠಡಿಗಳಲ್ಲಿ ಅವರನ್ನು ಕೂಡಿ ಹಾಕಿ ಚಿತ್ರ ಹಿಂಸೆ ಕೊಡುವ ಐಸಿಸ್ ಉಗ್ರರು, ತಮ್ಮ ಕಾಮದ ಆಸೆ ತೀರಿಸಿಕೊಳ್ಳಲು ಅವರ ಮೇಲೆ ಎರಗುತ್ತಾರೆ. ಲೈಂಗಿಕ ದೌರ್ಜನ್ಯ ಎಸಗುವುದಲ್ಲದೇ, ಅವರು ಯಾವುದೇ ಕಾರಣಕ್ಕೂ ಗರ್ಭ ಧರಿಸದಂತೆ ತಡೆಯಲು ಒತ್ತಾಯಪೂರ್ವಕವಾಗಿ ಮಾತ್ರೆ ನುಂಗಿಸುತ್ತಾರೆ.

ಮಾತ್ರೆ ನುಂಗದವರಿಗೆ ಗರ್ಭ ನಿರೋಧಕ ಇಂಜೆಕ್ಷನ್ ಕೊಡುತ್ತಾರೆ. ಆಕಸ್ಮಿಕವಾಗಿ ಗರ್ಭಿಣಿಯರಾದಲ್ಲಿ ಅವರ ಗರ್ಭಪಾತ ಮಾಡಿಸಿ ಮತ್ತೆ ಅತ್ಯಾಚಾರಕ್ಕೆ ಬಳಸಿಕೊಳ್ಳಲಾಗುತ್ತದೆ. ಲೈಂಗಿಕ ಗುಲಾಮಿ ಪದ್ಧತಿಯಂತೆ ಲೈಂಗಿಕತೆಗೆ ಬಳಸಿಕೊಳ್ಳುವ ಸಂದರ್ಭದಲ್ಲಿ ಹೆಣ್ಣುಮಕ್ಕಳು ಗರ್ಭ ಧರಿಸದಂತೆ ನೋಡಿಕೊಳ್ಳಬೇಕಿದೆ. ಇದನ್ನೇ ಐಸಿಸ್ ಉಗ್ರರು ಅನುಸರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...