alex Certify
ಕನ್ನಡ ದುನಿಯಾ       Mobile App
       

Kannada Duniya

10 ವರ್ಷದ ಬಾಲಕನ ಕೈಯ್ಯಲ್ಲಿ ಶಿರಚ್ಛೇದನ ಮಾಡಿಸಿದ ಉಗ್ರರು

ISIS-boy-

ಉಗ್ರ ಕೃತ್ಯಗಳ ಮೂಲಕ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಐಸಿಸ್ ಉಗ್ರರು ಇದೀಗ ಹತ್ತು ವರ್ಷದ ಬಾಲಕನ ಕೈಯಲ್ಲಿ ಶಿರಚ್ಛೇದ ಮಾಡಿಸಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು ಆಘಾತಕ್ಕೆ ಕಾರಣವಾಗಿದೆ.

ಹೌದು. ಇರಾಕ್‌- ಸಿರಿಯಾದಲ್ಲಿ ಈಗಾಗಲೇ ತನ್ನ ನೆಲೆಯನ್ನು ಗಟ್ಟಿಗೊಳಿಸಿಕೊಂಡಿರುವ ಐಸಿಸ್ ಸಂಘಟನೆ ಪ್ರಚಾರದ ಸಲುವಾಗಿ ಹತ್ತು ವರ್ಷ ಪ್ರಾಯದ ಇಂಗ್ಲೀಷ್‌ ಮಾತನಾಡಬಲ್ಲ ಹುಡುಗನೊಬ್ಬ ಹತ್ಯೆ ಮಾಡಿರುವ ಭೀಕರ ದೃಶ್ಯವಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಈ ವಿಡಿಯೋದಲ್ಲಿ ಬಾಲಕ ಹರಿತವಾದ ಚೂರಿಯನ್ನು ಝಳಪಿಸುತ್ತಾ ಒತ್ತೆಯಾಳಿನ ಶಿರಚ್ಛೇದನ ನಡೆಸಿದ್ದು ಮಾತ್ರವಲ್ಲ, ‘ಇಸ್ಲಾಂ ನ ಶರಿಯಾ ವಿರುದ್ಧ ಹೋರಾಡುವುದಕ್ಕೆ ಸೈನಿಕರಿಗೆ ಶಸ್ತ್ರಾಸ್ತ್ರ ಕೊಟ್ಟು ಹಣ ಖರ್ಚು ಮಾಡುತ್ತಿರುವ ಅಮೆರಿಕವೇ, ನಿನಗಿದೋ ಎಚ್ಚರಿಕೆ’ ಎಂದು ಎಚ್ಚರಿಕೆ ನೀಡಿದ್ದು, ಸಿರಿಯಾದ ದಾಬಿಕ್‌ನಲ್ಲಿ ‘ಐಸಿಸ್‌ ತನ್ನ ಶತ್ರುಗಳನ್ನು ಈ ರೀತಿ ಚೆಂಡಾಡುತ್ತದೆ’ ಎಂದು ಅಂಗ್ಲ ಭಾಷೆಯಲ್ಲಿ ಹೇಳಿರುವುದೂ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...