alex Certify
ಕನ್ನಡ ದುನಿಯಾ       Mobile App
       

Kannada Duniya

ಷೇರು ಮಾರುಕಟ್ಟೆಗೂ ಐಸಿಸ್ ಉಗ್ರರ ಲಗ್ಗೆ

ISIS-militants-making-millions-by-playing-the-stock-market-under-bankers-noses-498535

ಉಗ್ರ ಚಟುವಟಿಕೆಗಳ ಮೂಲಕ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಐಸಿಸ್ ಉಗ್ರ ಸಂಘಟನೆ ಇದೀಗ ಷೇರು ಮಾರುಕಟ್ಟೆಯನ್ನೂ ಪ್ರವೇಶಿಸಿರುವ ಆಘಾತಕಾರಿ ಅಂಶ ಬಯಲಾಗಿದ್ದು, ಹೂಡಿಕೆದಾರರನ್ನು ಬೆಚ್ಚಿ ಬೀಳಿಸಿದೆ.

ಹೌದು. ತೈಲ ನಿಕ್ಷೇಪ, ಹಫ್ತಾ ವಸೂಲಿ ಸೇರಿದಂತೆ ಹಲವು ಮೂಲಗಳಿಂದ ಆದಾಯ ಸಂಗ್ರಹಿಸುತ್ತಿದ್ದ ಐಸಿಸ್ ಉಗ್ರರು, ಇದೀಗ ಷೇರು ಮಾರುಕಟ್ಟೆಯನ್ನೂ ಸಹ ಪ್ರವೇಶಿಸಿದ್ದು, ಪ್ರತಿ ತಿಂಗಳು ಮಿಲಿಯನ್‌ ಡಾಲರ್‌ ‌‌‌ಗಟ್ಟಲೇ ಆದಾಯ ಗಳಿಸುತ್ತಿದ್ದಾರೆ ಎನ್ನಲಾಗಿದೆ.

2014ರಲ್ಲಿ ಇರಾಕ್ ನ ಮೊಸುಲ್ ನಗರದ ಮೇಲೆ ದಾಳಿ ನಡೆಸಿದ್ದ ಐಸಿಸ್‌ ಉಗ್ರರು, ಅಲ್ಲಿನ ಸೆಂಟ್ರಲ್‌ ಬ್ಯಾಂಕ್‌ ‌ನಿಂದ 429 ಮಿಲಿಯನ್‌‌ ಡಾಲರ್‌ ಹಣವನ್ನು ಲೂಟಿ ಮಾಡಿದ್ದರು.ಈ ಹಣವನ್ನು ಹವಾಲಾ ದಂಧೆ ಮೂಲಕ ಕೆಲ ಬ್ಯಾಂಕ್‌ ಅಧಿಕಾರಿಗಳಿಗೆ ಹೆದರಿಕೆ ಹಾಕಿ ಅವರ ನೆರವಿನಿಂದ ಮಧ್ಯ ಏಷ್ಯಾ ರಾಷ್ಟ್ರಗಳ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಪ್ರತಿ ತಿಂಗಳು 20 ಮಿಲಿಯನ್‌ ಡಾಲರ್‌ ಹಣ ಗಳಿಸುತ್ತಿದ್ದಾರೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದ್ದು ಆಘಾತಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...