alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ದಾಳಿಯ ರಹಸ್ಯ ಬಾಯ್ಬಿಟ್ಟ ಡೇವಿಡ್‌ ಹೆಡ್ಲಿ

nia-chargesheets-headley-attacks-others-case-26_eb8ad89e-cd8a-11e5-9f1f-e42e029c5977

2008 ರ ನವೆಂಬರ್ 26 ರಂದು ನಡೆದಿದ್ದ ಮುಂಬೈ ದಾಳಿ ಕುರಿತಾಗಿ ಪಾಕ್‌- ಅಮೆರಿಕನ್‌ ಉಗ್ರ ಏಜೆಂಟ್‌ ಡೇವಿಡ್‌ ಹೆಡ್ಲಿ ಭಯಾನಕ ಸತ್ಯವನ್ನು ಬಾಯ್ಬಿಟ್ಟಿದ್ದು, ಪಾಕ್ ನ ಗೋಸುಂಬಿ ಬಣ್ಣ ಮತ್ತೆ ಬಯಲಾದಂತಾಗಿದೆ.

ಹೌದು. ಅಮೆರಿಕಾದ ನ್ಯಾಯಾಲಯವೊಂದರಲ್ಲಿ ಭಾನುವಾರ ನಡೆದ ವಿಚಾರಣೆ ಸಮಯದಲ್ಲಿ ಹೆಡ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಈ ದಾಳಿ ಪಾಕ್ ಸರ್ಕಾರದ ಸಹಕಾರದೊಂದಿಗೆ ನಡೆದಿತ್ತು ಎಂಬ ಸತ್ಯವನ್ನೂ ಸಹ ಹೊರಗೆಡವಿದ್ದಾನೆ ಎನ್ನಲಾಗಿದೆ.

ಅಲ್ಲದೇ ದಾಳಿಯ ಹೊಣೆಯನ್ನು ಐಎಸ್‌ಐ ಮೇಜರ್‌ ಇಕ್ಬಾಲ್‌, ಸಮೀರ್‌ ಅಲಿ ನಿರ್ವಹಿಸಿದ್ದು, ಎಲ್‌ ಇ ಟಿ ಉಗ್ರ ಜಕಿ ಉರ್‌ ರೆಹಮಾನ್‌ ಲಖ್ವಿಗೆ ಐಎಸ್‌ಐ ಬ್ರಿಗೇಡಿಯರ್‌ ಒಬ್ಬರು ನಿರ್ದೇಶನ ನೀಡುತ್ತಿದ್ದರು ಎಂದು ವಿಚಾರಣೆ ವೇಳೆ ಹೆಡ್ಲಿ ಹೇಳಿಕೆ ನೀಡಿದ್ದು, ಆ ಮೂಲಕ ಪಾಕ್ ನ ಭಂಡತನ ಪ್ರದರ್ಶನವಾದಂತಾಗಿದೆ.

ವಿಶೇಷವೆಂದರೆ ಹೆಡ್ಲಿ ಅಮೆರಿಕಾ ನ್ಯಾಯಾಲಯದಿಂದ 35 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಮುಂಬೈ ದಾಳಿಗೆ ಸಂಬಂಧಿಸಿದಂತೆ ಆತನನ್ನು ಭಾರತದ ನ್ಯಾಯಾಲಯದ ಎದುರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸುವ ಸಾಧ್ಯತೆ ದಟ್ಟವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...