alex Certify
ಕನ್ನಡ ದುನಿಯಾ       Mobile App
       

Kannada Duniya

ಇಟಲಿಯಲ್ಲಿಂದು ಅಂಬಾನಿ ಪುತ್ರಿಯ ಅದ್ದೂರಿ ನಿಶ್ಚಿತಾರ್ಥ

ಅಂಬಾನಿ ಪುತ್ರಿ ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಲ್ ಶುಕ್ರವಾರ ಇಟಲಿಯ ಲೇಕ್ ಕೋಮೋದಲ್ಲಿ ವೈಭವೋಪೇತ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ನಿಶ್ಚಿತಾರ್ಥದ ಕಾರ್ಯಕ್ರಮ ಶುಕ್ರವಾರ ನಡೆಯಲಿದ್ದರೂ, ಭಾನುವಾರದ ತನಕ ಲೇಕ್ ಕೋಮೋದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ನಿಶ್ಚಿತಾರ್ಥದ ಬಳಿಕ ಗ್ರಾಂಡ್ ಪಾರ್ಟಿ ನಡೆಯುವ ನಿರೀಕ್ಷೆಯಿದೆ.

ಅತಿಥಿಗಳನ್ನು ಗ್ರಾಂಡ್ ಲಂಚ್ ಮೂಲಕ ಅವರವರ ಹೊಟೇಲ್‌ಗಳಿಗೆ ಸ್ವಾಗತಿಸಲಾಗುತ್ತದೆ. ಸಂಜೆ 5ಕ್ಕೆ ಲೇಕ್ ಕೋಮೋದ ವಿಲ್ಲಾ ಬಾಲ್ಬಿನೋದಲ್ಲಿ ನಿಗದಿಯಾಗಿರುವ ಸೆಲೆಬ್ರೇಟರಿ ಡಿನ್ನರ್‌ ವ್ಯವಸ್ಥೆ ಮಾಡಲಾಗಿದೆ.

ಕೆಲ ತಿಂಗಳ ಹಿಂದೆ 33 ವರ್ಷದ ಆನಂದ್ ಪಿರಾಮಲ್ 26ರ ಹರೆಯದ ಇಶಾ ಅಂಬಾನಿಗೆ ಮಹಾರಾಷ್ಟ್ರದ ಮಹಾಬಲೇಶ್ವರ ದೇಗುಲದಲ್ಲಿ ಪ್ರೊಪೋಸಲ್ ಮಾಡಿದ್ದರು. ಮೇನಲ್ಲಿ ಪ್ರೊಪೋಸಲ್ ಅನ್ನು ಆಚರಿಸಲು ಪಾರ್ಟಿ ನಡೆಸಲಾಗಿತ್ತು. ಅಂಬಾನಿ ಹಾಗೂ ಪಿರಾಮಲ್ ಕುಟುಂಬ ಭಾಗವಹಿಸಿತ್ತು.

“ಆನಂದ್ ಹಾಗೂ ಇಶಾ ದೀರ್ಘಕಾಲದ ಗೆಳೆಯರು ಹಾಗೂ ಎರಡೂ ಕುಟುಂಬಗಳು ನಾಲ್ಕು ದಶಕಗಳ ಸ್ನೇಹ ಸಂಬಂಧ ಹೊಂದಿವೆ” ಎಂದು ಆ ವೇಳೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...