alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಾನಿ ಪುತ್ರಿಯ ಅದ್ಧೂರಿ ನಿಶ್ಚಿತಾರ್ಥಕ್ಕೆ ಬಂದೋರ್ಯಾರು ಗೊತ್ತಾ…?

ಯಾಕೋ ಇಟೆಲಿಯಲ್ಲಿ ಎಂಗೇಜ್ ಮೆಂಟ್, ವಿವಾಹಗಳು ಬಹಳ ಟ್ರೆಂಡ್ ಆಗುತ್ತಿವೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಟಲಿಯಲ್ಲಿ ವಿವಾಹವಾಗಿದ್ದು ಗೊತ್ತೇ ಇದೆ. ಬಳಿಕ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ವಿವಾಹವೂ ಇಟಲಿಯಲ್ಲಿ ನಿಗದಿಯಾಗಿತ್ತು. ಇದೀಗ ಅಂಬಾನಿ ಕುಟುಂಬದ ಕುಡಿಯ ನಿಶ್ಚಿತಾರ್ಥವೂ ಇಟಲಿಯಲ್ಲಿ ನಡೆದಿದೆ.

ಮುಕೇಶ್ ಮತ್ತು ನೀತಾ ಅಂಬಾನಿ ದಂಪತಿಯ ಪುತ್ರಿ ಇಶಾ ಅಂಬಾನಿ ವಿವಾಹ, ಸ್ವಾತಿ ಮತ್ತು ಅಜಯ್ ಪಿರಾಮಲ್ ಪುತ್ರ ಆನಂದ್ ಪಿರಾಮಲ್ ಅದ್ಧೂರಿ ವಿವಾಹ ನಿಶ್ಚಿತಾರ್ಥಕ್ಕೆ ಇಟಲಿಯ ಕೊಮೊ ಸರೋವರ ಸಾಕ್ಷಿಯಾಯಿತು. ಅಲ್ಲಿ ನಿರ್ಮಿಸಲಾಗಿದ್ದ ವರ್ಣರಂಜಿತ ಕಾರಂಜಿಯ ಮುಂದೆ ನವಜೋಡಿ ಪರಸ್ಪರ ಉಂಗುರ ಬದಲಾಯಿಸಿಕೊಂಡರು.

ಈ ಸಂದರ್ಭದಲ್ಲಿ ಬಾಲಿವುಡ್ಡಿನ ತಾರಾಗಣವೇ ಇಲ್ಲಿ ನೆರೆದಿತ್ತು. ಅನಿಲ್ ಕಪೂರ್, ಪ್ರಿಯಾಂಕಾ ಛೋಪ್ರಾ, ಸೋನಮ್ ಕಪೂರ್, ಜಾಹ್ನವಿ ಕಪೂರ್ ಸಮಾರಂಭದಲ್ಲಿ ಗಮನ ಸೆಳೆದರು. ಈ ವರ್ಷ ಅಂಬಾನಿ ಕುಟುಂಬದ ಎರಡನೇ ವಿವಾಹ ನಿಶ್ಚಿತಾರ್ಥ ಇದಾಗಿದೆ. ಜೂನ್ ನಲ್ಲಷ್ಟೇ ಇಶಾಳ ಅವಳಿ ಸಹೋದರ ಆಕಾಶ್ ಅಂಬಾನಿ, ಶ್ಲೋಕಾ ಮೆಹ್ತಾ ಜೊತೆ ವಿವಾಹ ನಿಕ್ಕಿ ಮಾಡಿಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...