alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ದೆವ್ವ…!

ಆ ಪಬ್‌ ನಲ್ಲಿ ಕೆಲಸ ಮಾಡುವ ಎಲ್ಲರಿಗೂ ವಿಚಿತ್ರ ಅನುಭವಗಳಾಗಿವೆಯಂತೆ..! ರಾತ್ರಿಯ ಹೊತ್ತು ನೆರಳೊಂದು ಓಡಾಡಿದಂತೆ, ಗ್ಲಾಸ್‌ಗಳು ಹಾರಿದಂತೆ, ಪಬ್‌ ನಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಮೆಟ್ಟಿಲಿಳಿಯುತ್ತಿರುವ ಶಬ್ಧ, ಇದ್ದಕ್ಕಿದ್ದಂತೆ ಲೈಟ್ಸ್‌ ಹೊತ್ತಿಕೊಳ್ಳುವುದು ಇಂಥ ವಿಚಿತ್ರ ಘಟನೆಗಳು ನಡೆಯುತ್ತಿವೆಯಂತೆ.

ಬ್ರಿಟನ್‌ ನ ಐತಿಹಾಸಿಕ ನಗರವಾಗಿರುವ ಕ್ಯಾಂಟರ್ಬರಿ ಹತ್ತಿರದಲ್ಲಿರುವ ಪಬ್‌ ಒಂದರಲ್ಲಿ ಕೆಲವು ತಿಂಗಳುಗಳಿಂದ ವಿಚಿತ್ರ ಘಟನೆಗಳು ನಡೆಯುತ್ತಿದ್ದು, ಇದು ದೆವ್ವದ ಕಾಟ ಎಂದು ನಂಬಿ ಅಲ್ಲಿಯ ಕೆಲಸಗಾರರೆಲ್ಲ ಕೆಲಸ ಬಿಟ್ಟಿದ್ದಾರಂತೆ. ಸಧ್ಯಕ್ಕೆ ಪಬ್‌ಗೆ ಬೀಗ ಹಾಕಲಾಗಿದ್ದು, ಈಗ ಇದು ದೆವ್ವ ಪೀಡಿತ ಪ್ರದೇಶ ಎಂಬ ಸುದ್ದಿ ಹರಡಿದೆ.

ಈ ಪಬ್‌ ನ ಮಾಲಿಕ ಅಲಿಸ್ಟರ್‌ ಕೊಲಿನ್ಸ್‌ ಎಂಬಾತ ಈಗ ತಮ್ಮ ಪಬ್‌ ನಲ್ಲಿ ನಡೆಯುತ್ತಿರುವ ವಿಚಿತ್ರ ಘಟನೆಯನ್ನ ಸಿಸಿ ಟಿವಿ ಮೂಲಕ ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾನೆ. ಆತ ಅಪ್‌ ಲೋಡ್‌ ಮಾಡಿರುವ ವಿಡಿಯೋದಲ್ಲಿ ಪಬ್‌ ನ ಕುರ್ಚಿಗಳು ತನ್ನಂತಾನೇ ಸ್ಥಾನಪಲ್ಲಟ ಮಾಡುತ್ತವೆ. ಛತ್ರಿಗಳು ತನ್ನಂತಾನೇ ಬಿಚ್ಚಿಕೊಳ್ಳುತ್ತವೆ. ಇದೆಲ್ಲ ಎಡಿಟೆಡ್‌ ವಿಡಿಯೋಗಳಲ್ಲ ಅಂತ ಆತ ಹೇಳುತ್ತಿದ್ದಾನೆ.

ಈಗ ಈ ಪಬ್‌ ನಲ್ಲಿ ನಿಜವಾಗಿಯೂ ದೆವ್ವವಿದೆಯಾ ಎಂಬುದನ್ನ ಟೆಸ್ಟ್‌ ಕೂಡ ಮಾಡುತ್ತಾರಂತೆ..!  ಸಿನಿಮೀಯ ರೀತಿಯಲ್ಲಿ ಕಂಡುಬರುವ ಇವೆಲ್ಲ ಅದೆಷ್ಟು ನಿಜವೋ ಸುಳ್ಳೋ ತನಿಖೆಯಿಂದಷ್ಟೇ ತಿಳಿದುಬರಬೇಕಷ್ಟೆ..!

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...