alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸೆಣಬಿನ ಮಂಚದ ಬೆಲೆ ಕೇಳಿದ್ರೆ ದಂಗಾಗ್ತೀರಾ..!

ಪಾಶ್ಚಿಮಾತ್ಯ ರಾಷ್ಟ್ರಗಳು ಮೊದಲೆಲ್ಲಾ ಭಾರತೀಯರ ಸಂಸ್ಕೃತಿಯನ್ನು ಅಪಹಾಸ್ಯ ಮಾಡುತ್ತಿದ್ರು. ಆದ್ರೆ ಈಗ ಭಾರತದ ಸಂಪ್ರದಾಯ ಮತ್ತು ಆಚರಣೆಯಲ್ಲಿ ಆರೋಗ್ಯ ಅಡಗಿದೆ ಅನ್ನೋದು ಅವರಿಗೂ ಅರ್ಥವಾಗಿದೆ. ಉಪ್ಪು, ಸಾಸಿವೆ ಎಣ್ಣೆ, ಮಶಿ ಕೆಂಡ, ಕಹಿಬೇವು, ಲವಂಗ ಇವನ್ನೆಲ್ಲ ಹಲ್ಲುಜ್ಜಲು ಬಳಸಲು ಆರಂಭಿಸಿದ್ರು.

ಆರೋಗ್ಯ ರಾಸಾಯನಿಕಗಳಲ್ಲಲ್ಲ, ಗಿಡಮೂಲಿಕೆಗಳಲ್ಲಿದೆ ಅನ್ನೋದನ್ನು ಅರಿತಿದ್ರು. ಇದೀಗ ಪಾಶ್ಚಿಮಾತ್ಯ ಕಂಪನಿಗಳೆಲ್ಲ ತಮ್ಮ ಗ್ರಾಹಕರನ್ನು ಮರುಳು ಮಾಡಲು ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಇದು ಅವರ ಮಾರ್ಕೆಟಿಂಗ್ ಗಿಮಿಕ್ ಆಗಿಬಿಟ್ಟಿದೆ.

ಪಾಶ್ಚಿಮಾತ್ಯರಲ್ಲಿ ಯೋಗ, ಆಯುರ್ವೇದ ಮತ್ತು ದೇಸಿ ವಸ್ತುಗಳ ಕ್ರೇಝ್ ಹೆಚ್ಚಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಸೆಣಬಿನಿಂದ ಮಾಡಿದ ಈ ಮಂಚ. ಆಸ್ಟ್ರೇಲಿಯಾದಲ್ಲಿ ಈ ಮಂಚಕ್ಕೆ ನಿಗದಿ ಮಾಡಿರೋ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 990 ಡಾಲರ್.

ಅಂದ್ರೆ ಅಂದಾಜು 50,000 ರೂಪಾಯಿ. ಭಾರತದ ಸಾಂಪ್ರದಾಯಿಕ ಡೇ ಬೆಡ್ ಅಂತಾ ಇದಕ್ಕೆ ಕರೆದಿದ್ದು, ಅತ್ಯಂತ ಆರಾಮದಾಯಕ ಅಂತಾನೂ ಬಣ್ಣಿಸಲಾಗಿದೆ. ಮಂಚದ ವಿನ್ಯಾಸಕ್ಕೆ 100 ವರ್ಷಗಳ ಇತಿಹಾಸವಿದೆ ಅಂತಾ ಜಾಹೀರಾತಿನಲ್ಲಿ ಪ್ರಕಟಿಸಲಾಗಿದೆ. ನಮ್ಮ ಸಂಪ್ರದಾಯವನ್ನು ಅಳವಡಿಸಿಕೊಳ್ಳುವುದು ಮಾತ್ರವಲ್ಲ, ವಿದೇಶೀಯರು ಅದರಿಂದ ಹೇಗೆ ಹಣಗಳಿಸ್ತಿದ್ದಾರೆ ಅನ್ನೋ ಬಗ್ಗೆ ಟ್ವಿಟ್ಟರ್ ನಲ್ಲೂ ಚರ್ಚೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...