alex Certify
ಕನ್ನಡ ದುನಿಯಾ       Mobile App
       

Kannada Duniya

ಭಯವಲ್ಲ, ನಗು ತರಿಸುತ್ತೆ ಈ ದೆವ್ವ…!

china-gostಇತ್ತೀಚೆಗಂತೂ ಕ್ಯಾಮೆರಾ ಕಣ್ಣಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ ಅನ್ನುವಂತಾಗಿದೆ. ಮೊಬೈಲ್, ಸಿ.ಸಿ. ಕ್ಯಾಮೆರಾಗಳಿಂದಾಗಿ ನಂಬಲಸಾಧ್ಯವಾದ ಅದೆಷ್ಟೋ ಘಟನೆಗಳು ಸೆರೆಯಾಗಿವೆ.

ಕೆಲವೊಮ್ಮೆ ದೆವ್ವಗಳು ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂಬ ಸುದ್ದಿ ಹರಿದಾಡುತ್ತವೆ. ಚೀನಾದ ಫ್ಯಜಿಯಾನಾ ಪ್ರಾಂತ್ಯದ ಜಿನ್ ಜಿಯಾಂಗ್ ವಸತಿ ಕಟ್ಟಡದಲ್ಲಿನ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾದ ದೆವ್ವ ಭಯದ ಬದಲಿಗೆ ನಗು ತರಿಸುತ್ತದೆ.

ದೆವ್ವದ ವೇಷ ಧರಿಸಿ ಬಂದ ಕಳ್ಳನೊಬ್ಬ, ಗಲಿಬಿಲಿಯಿಂದ ಕ್ಯಾಮೆರಾ ಕಡೆಗೆ ನೋಡುತ್ತಾ, ದೆವ್ವದ ಬದಲು ಕಳ್ಳನ ರೀತಿಯಲ್ಲೇ ಓಡಾಡಿದ್ದಾನೆ.

ಕ್ಯಾಮೆರಾ ನೋಡಿದ ಕೂಡಲೇ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ಓಡಾಡುತ್ತಾನೆ. ಅಂದ ಹಾಗೇ ದೆವ್ವದ ವೇಷ ಧರಿಸಿ ಬಂದಿದ್ದ ಕಳ್ಳನಿಗೆ ಕದಿಯಲು ಒಂದೇ ಒಂದು ವಸ್ತು ಕೂಡ ಸಿಕ್ಕಿಲ್ಲ.

ಇದೆಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೊನೆಗೆ ಇದನ್ನೇ ಆಧರಿಸಿ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ. ಈ ಕಳ್ಳ ದೆವ್ವದ ವಿಡಿಯೋ ವೈರಲ್ ಆಗಿದ್ದು, ಅಪಾರ ಸಂಖ್ಯೆಯ ಮಂದಿ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...