alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ ! ಐಸಿಸ್ ಉಗ್ರರ ಈ ಕೃತ್ಯ ಕೇಳಿದ್ರೆ ಬೆಚ್ಚಿ ಬೀಳ್ತೀರಿ !!

150216_gma_brianross_33x16_1600

ಐಸಿಸ್ ಉಗ್ರರ ಅಟ್ಟಹಾಸ ಹೆಚ್ಚುತ್ತಿದ್ದು, ಈ ಉಗ್ರ ಸಂಘಟನೆಯನ್ನು ತೊರೆಯಲು ಮುಂದಾಗಿದ್ದ ಇಪ್ಪತ್ತು ಮಂದಿಯ ತಲೆಯನ್ನು ಸಾರ್ವಜನಿಕವಾಗಿ ಕಡಿದು ಹಾಕಿರುವ ಘಟನೆ ಇರಾಕಿನ ಮೊಸುಲ್ ಪಟ್ಟಣದಲ್ಲಿ ನಡೆದಿದೆ.

ಹೌದು. ಹಣ ಮತ್ತು ಹೆಣ್ಣಿನಾಸೆಗೆ ಐಸಿಸ್ ಉಗ್ರ ಸಂಘಟನೆ ಸೇರಿರುವ ಉಗ್ರರ ಪೈಕಿ ಹಲವರು ಈಗಾಗಲೇ ಉಗ್ರರ ಕೃತ್ಯದಿಂದ ಬೇಸತ್ತಿದ್ದು, ಇದೇ ಕಾರಣಕ್ಕೆ ಸಂಘಟನೆಯನ್ನು ತೊರೆದು ನೆಮ್ಮದಿಯ ಜೀವನ ನಡೆಸಲು ಮುಂದಾಗುತ್ತಿದ್ದಾರೆ.

ಇದೇ ಉದ್ದೇಶವನ್ನಿಟ್ಟುಕೊಂಡು ಇರಾಕ್ ಮತ್ತು ಸಿರಿಯಾದಲ್ಲಿ ಐಸಿಸ್ ಸಂಘಟನೆಯ 20 ಉಗ್ರಗಾಮಿಗಳ ಗುಂಪು ನಿನೆವೇಹ್ ಪ್ರಾಂತ್ಯದ ಮೊಸುಲ್ ನಗರದ ಯುದ್ಧಭೂಮಿಯಿಂದ ಪರಾರಿಯಾಗಲು ಯತ್ನಿಸಿದ್ದು, ಇದನ್ನರಿತ ಉಗ್ರ ಸಂಘಟನೆ ಅವರನ್ನು ಸೆರೆ ಹಿಡಿದು ಸಾರ್ವಜನಿಕವಾಗಿ ತಲೆ ಕಡಿದಿದೆ ಎನ್ನಲಾಗಿದೆ.

ಉಗ್ರ ಸಂಘಟನೆಯಿಂದ ಪರಾರಿಯಾಗಲು ಯತ್ನಿಸಿದವರನ್ನು ಮೊಸುಲ್ ಪಟ್ಟಣ ಸಮೀಪದ ತಪಾಸಣಾ ಸ್ಥಳದಲ್ಲಿ ಶುಕ್ರವಾರ ಸಂಜೆ ಪತ್ತೆ ಹಚ್ಚಲಾಗಿದ್ದು, ತದನಂತರ ಅವರನ್ನು ಷರಿಯಾ ನ್ಯಾಯಾಲಯದಲ್ಲಿ ವಿಚಾರಣೆಗೆ ಗುರಿಪಡಿಸಿ ರಾಜದ್ರೋಹದ ಆರೋಪದಲ್ಲಿ ಬಂಧಿತರ ತಲೆ ಕಡಿಯುವಂತೆ ಷರಿಯಾ ನ್ಯಾಯಾಲಯ ಆಜ್ಞಾಪಿಸಿತು. ಅದರಂತೆ ಈ 20 ಮಂದಿಯ ತಲೆ ಕಡಿಯುವ ಮೂಲಕ ಐಸಿಸ್ ಸಂಘಟನೆ ಸೇರಿದವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...