alex Certify
ಕನ್ನಡ ದುನಿಯಾ       Mobile App
       

Kannada Duniya

ಸೇತುವೆ ಕೆಳಗೆ ನೇತಾಡ್ತಿದ್ದ ಕಾರು ಕಂಡು ದಂಗಾದ್ರು ಜನ

ಟೊರಾಂಟೋದ ಜನ ಮೂರು ದಿನಗಳ ಹಿಂದೆ ಕಂಡು ಬಂದ ದೃಶ್ಯ ನೋಡಿ ದಂಗಾಗಿದ್ದರು. ಟೊರಾಂಟೋ ಸೇತುವೆ ಕೆಳಗಿನ ವೈರ್ ಮೇಲೆ ಕಾರೊಂದು ನೇತಾಡುತ್ತಿದ್ದರಿಂದ ಆತಂಕಗೊಂಡು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು.

ಕೂಡಲೇ ಧಾವಿಸಿ ಬಂದ ಪೊಲೀಸರು, ಸೇತುವೆ ಮೇಲಿನಿಂದ ಕಾರು ಕೆಳಗೆ ಬಿದ್ದ ವೇಳೆ ನಡುವೆ ವೈರ್ ಗೆ ಸಿಕ್ಕಿ ಹಾಕಿಕೊಂಡಿರಬಹುದೇ ಎಂದು ಪರಿಶೀಲಿಸಿದ್ದಾರೆ. ಆದರೆ ಸೇತುವೆ ಮೇಲಿಂದ ಕಾರು ಬಿದ್ದ ಯಾವುದೇ ಕುರುಹು ಸಿಗಲಿಲ್ಲ. ಅಲ್ಲದೇ ಕಾರಿನೊಳಗೆ ಯಾರಾದರೂ ಇದ್ದರೇ ಎಂದರೆ ಅದರ ಸುಳಿವೂ ಇರಲಿಲ್ಲ.

ಕಡೆಗೆ ಯಾವುದೋ ಚಿತ್ರದ ಚಿತ್ರೀಕರಣಕ್ಕೆಂದು ಬಂದವರು ಈ ರೀತಿ ಮಾಡಿರಬಹುದೆಂದು ಭಾವಿಸಲಾಯಿತಾದರೂ ಅದಕ್ಕೂ ಯಾವುದೇ ದಾಖಲೆ ಇರಲಿಲ್ಲ. ಕಾರಿಗೆ ನಂಬರ್ ಪ್ಲೇಟ್ ಸಹ ಇರಲಿಲ್ಲವೆನ್ನಲಾಗಿದ್ದು, ಇದೀಗ ಪೊಲೀಸರು ಈ ಕಾರಿನ ರಹಸ್ಯವನ್ನು ಬೇಧಿಸಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...