alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಚೋಟಾ ಶಕೀಲ್ ಸಾವಿನ ವದಂತಿ

ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಚೋಟಾ ಶಕೀಲ್ ಸತ್ತಿದ್ದಾನೆ ಅನ್ನೋ ಅನುಮಾನ ವ್ಯಕ್ತವಾಗಿದೆ. ಶಕೀಲ್ ನ ಸಂಬಂಧಿ ಹಾಗೂ ಗ್ಯಾಂಗ್ ಸದಸ್ಯನ ನಡುವಣ ಸಂಭಾಷಣೆ ವೈರಲ್ ಆಗಿದೆ. ಆದ್ರೆ ಅದರ ಸತ್ಯಾಸತ್ಯತೆ ಬಗ್ಗೆ ತನಿಖೆ ಆಗಬೇಕಿದೆ. ಮುಂಬೈ ಪೊಲೀಸರು ಹಾಗೂ NSCS ಅಧಿಕಾರಿಗಳು ಅದನ್ನು ಪರಿಶೀಲಿಸುತ್ತಿದ್ದಾರೆ.

57 ವರ್ಷದ ಚೋಟಾ ಶಕೀಲ್ ಜನವರಿ 6ರಂದು ಇಸ್ಲಾಮಾಬಾದ್ ನಲ್ಲಿ ಮೃತಪಟ್ಟಿದ್ದಾನೆ ಅಂತಾ ಹೇಳಲಾಗ್ತಿದೆ. ಆತನಿಗೆ ಹೃದಯಾಘಾತವಾಗಿತ್ತು, ಕೂಡಲೇ ರಾವಲ್ಪಿಂಡಿಯ ಕಂಬೈನ್ಡ್ ಮೆಡಿಕಲ್ ಆಸ್ಪತ್ರೆಗೆ ಕರೆತರಲಾಯ್ತು. ಆದ್ರೆ ಅಷ್ಟರಲ್ಲಾಗ್ಲೇ ಆತ ಮೃತಪಟ್ಟಿದ್ದ ಅಂತಾ ಹೇಳಲಾಗ್ತಿದೆ.

ಇನ್ನೊಂದು ಮೂಲದ ಪ್ರಕಾರ ಪಾಕಿಸ್ತಾನದ ಐಎಸ್ಐ ಒಡೆಸ್ಸಾ ಮೂಲಕ ಚೋಟಾ ಶಕೀಲ್ ನನ್ನು ಹತ್ಯೆ ಮಾಡಿಸಿದೆಯಂತೆ. 2 ದಿನ ಆತನ ಶವವನ್ನು ಶವಾಗಾರದಲ್ಲಿ ಇಡಲಾಗಿತ್ತು. ನಂತರ ವಿಮಾನದ ಮೂಲಕ ಕರಾಚಿಗೆ ಕಳುಹಿಸಲಾಗಿದೆ ಅಂತಾ ಮೂಲಗಳು ತಿಳಿಸಿವೆ. ಡಿಫೆನ್ಸ್ ಹೌಸಿಂಗ್ ಅಥಾರಿಟಿಯ ಸ್ಮಶಾನದಲ್ಲೇ ಅವನನ್ನು ಮಣ್ಣು ಮಾಡಲಾಗಿದೆಯಂತೆ.

ನಂತರ ಆತನ ಎರಡನೇ ಪತ್ನಿ ಆಯೇಶಾ ಹಾಗೂ ಕುಟುಂಬದವರನ್ನೆಲ್ಲ ಮನೆ ಖಾಲಿ ಮಾಡಿಸಿ ಲಾಹೋರ್ ನ ಐಎಸ್ಐ ಹೌಸ್ ನಲ್ಲಿ ಇಡಲಾಗಿದೆಯಂತೆ. ಶಕೀಲ್ ಗೆ ಇಬ್ಬರು ಪತ್ನಿಯರು ಹಾಗೂ ಮೂವರು ಮಕ್ಕಳಿದ್ದಾರೆ. ಕೇವಲ 20 ಜನರಿಗೆ ಮಾತ್ರ ಚೋಟಾ ಸಾವಿನ ವಿಷಯ ಗೊತ್ತಿತ್ತಂತೆ. 2 ದಿನಗಳ ನಂತರ ದಾವೂದ್ ಗೆ ಮಾಹಿತಿ ತಲುಪಿತ್ತು.

ಚೋಟಾ ಶಕೀಲ್, ದಾವೂದ್ ನ ನಂಬಿಗಸ್ಥ ಬಂಟನಾಗಿದ್ದ. ಆತನ ಸಾವಿನಿಂದ ದಾವೂದ್ ನಲ್ಲಿ ಖಿನ್ನತೆ ಆವರಿಸಿದೆಯಂತೆ. ಜನವರಿ ಮತ್ತು ಮಾರ್ಚ್ ನಲ್ಲಿ ಆತ ಆಸ್ಪತ್ರೆಗೂ ದಾಖಲಾಗಿದ್ದ. ಭಾರತಕ್ಕೆ ಬರಲು ದಾವೂದ್ ಪ್ಲಾನ್ ಮಾಡುತ್ತಿದ್ದಾನೆ ಅಂತಾನೂ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...