alex Certify
ಕನ್ನಡ ದುನಿಯಾ       Mobile App
       

Kannada Duniya

ಯೂನಿವರ್ಸಿಟಿಯಲ್ಲಿ ಶುರುವಾಯ್ತು ಲೈಂಗಿಕ ಶಿಕ್ಷಣ

irish

ಲಂಡನ್: ಚೀನಾದ ಕಾಲೇಜೊಂದರಲ್ಲಿ ಲವ್ ಟ್ರೈನಿಂಗ್ ಹೇಳಿಕೊಡುವ ಪಠ್ಯವನ್ನು ಅಳವಡಿಸಿದ್ದ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಭಾರತದಲ್ಲಿ ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಅಳವಡಿಸುವ ಕುರಿತಂತೆ ಪರ- ವಿರೋಧದ ಚರ್ಚೆಗಳು ವ್ಯಾಪಕವಾಗಿ ನಡೆದಿವೆ.

ಹೀಗಿರುವಾಗಲೇ ಐರ್ಲೆಂಡ್ ನ ವಿಶ್ವವಿದ್ಯಾಲಯವೊಂದರಲ್ಲಿ ಲೈಂಗಿಕ ಶಿಕ್ಷಣ ಕೋರ್ಸ್ ಆರಂಭಿಸಲಾಗಿದೆ. ಹೌದು, ಐರ್ಲೆಂಡ್ ನ ಪ್ರತಿಷ್ಠಿತ ಡಬ್ಲಿನ್ ವಿಶ್ವವಿದ್ಯಾಲಯದಲ್ಲಿ ಸೆಕ್ಸ್ ಕೋರ್ಸ್ ಆರಂಭಿಸಲಾಗಿದೆ. ಈಗಾಗಲೇ ವೆಬ್ ಸೈಟ್ ನಲ್ಲಿ ಜಾಹೀರಾತು ನೀಡಲಾಗಿದೆ. ಸೆಪ್ಟಂಬರ್ ನಿಂದ ಲೈಂಗಿಕತೆ ಮತ್ತು ಲೈಂಗಿಕ ಆರೋಗ್ಯ ಕುರಿತಂತೆ ತರಗತಿಗಳು ಆರಂಭವಾಗಲಿವೆ ಎಂದು ವಿಶ್ವವಿದ್ಯಾಲಯ ಹೇಳಿದ್ದು, ಈ ಮೂಲಕ ಪ್ರವೇಶಕ್ಕೆ ವಿದ್ಯಾರ್ಥಿಗಳನ್ನು ಆಹ್ವಾನಿಸಿದೆ.

ಲೈಂಗಿಕತೆ ಮತ್ತು ಲೈಂಗಿಕ ಆರೋಗ್ಯ ಶಿಕ್ಷಣದ ಕೋರ್ಸ್ ನಲ್ಲಿ, ಲೈಂಗಿಕತೆಯ ವೈವಿಧ್ಯತೆ, ಸಂಸ್ಕೃತಿ ಮೊದಲಾದ ವಿಷಯಗಳನ್ನು ಹೇಳಿಕೊಡಲಾಗುವುದು. ಸೆಪ್ಟಂಬರ್ ನಿಂದ ತರಗತಿಗಳು ಆರಂಭವಾಗಲಿವೆ. ಐರ್ಲೆಂಡ್ ನಲ್ಲಿ ಲೈಂಗಿಕತೆ ಮುಕ್ತವಾಗಿದೆ ಅದಕ್ಕೆ ಎಲ್ಲೆಯಿಲ್ಲ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...