alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಲಿಮೆಂಟ್ ಗೆ ಒಳ ಉಡುಪು ಹಿಡಿದು ಬಂದ ಸಂಸದೆ

ಐರ್ಲ್ಯಾಂಡ್ ನಲ್ಲಿ ಅತ್ಯಾಚಾರಿ ಆರೋಪಿ ಬಿಡುಗಡೆ ಮಾಡಿರುವ ವಿಷ್ಯ ಪ್ರತಿಭಟನೆಗೆ ಕಾರಣವಾಗಿದೆ. ಪೀಡಿತೆ ಒಳ ಉಡುಪನ್ನು ಸಾಕ್ಷಿಯಾಗಿ ಪರಿಗಣಿಸಿ ಕೋರ್ಟ್ ಅತ್ಯಾಚಾರಿ ಆರೋಪಿಯನ್ನು ಬಿಡುಗಡೆ ಮಾಡಿದೆ. ಇದಕ್ಕೆ ಸಂಸತ್ ನಲ್ಲಿ ವಿಭಿನ್ನ ಪ್ರತಿಭಟನೆ ನಡೆದಿದೆ.

ಸಂಸದೆಯೊಬ್ಬರು ಪಾರ್ಲಿಮೆಂಟ್ ಗೆ ಒಳ ಉಡುಪು ತಂದು ವಿರೋಧ ವ್ಯಕ್ತಪಡಿಸಿದ್ದಾರೆ. ಸಂಸದೆ ರುತ್ ಕಾಪಿಯರ್, ಪಾರ್ಲಿಮೆಂಟ್ ನಲ್ಲಿ ಒಳ ಉಡುಪು ತೋರಿಸಿ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಒಳ ಉಡುಪನ್ನು ಸಾಕ್ಷಿಯಾಗಿ ಪರಿಗಣಿಸಿ ಆರೋಪಿಯನ್ನು ಬಿಟ್ಟಿದ್ದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಸಂಸದೆ ವಿರೋಧದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಂಸದೆ ಇದೇ ವಿಷ್ಯವನ್ನು ಟ್ವಿಟ್ ಕೂಡ ಮಾಡಿದ್ದಾರೆ. ಕೋರ್ಟ್ ನಿರ್ಧಾರ ಸರಿಯಲ್ಲವೆಂದು ವಿರೋಧಿಸಿದ್ದಾರೆ. 17 ವರ್ಷದ ಹುಡುಗಿ ಮೇಲೆ 27 ವರ್ಷದ ಯುವಕ ಅತ್ಯಾಚಾರವೆಸಗಿದ್ದಾನೆಂಬ ಆರೋಪವಿದೆ. ಕೋರ್ಟ್ ವಿಚಾರಣೆ ವೇಳೆ ವಕೀಲರು, ಒಳ ಉಡುಪು ತೋರಿಸಿದ್ದರು. ಹುಡುಗಿ ಧರಿಸಿದ್ದ ಒಳ ಉಡುಪು ರಿಬ್ಬನ್ ನಿಂದ ಕಟ್ಟಿತ್ತು. ಅದನ್ನು ಬಿಚ್ಚಲು ಸಾಧ್ಯವಿರಲಿಲ್ಲ. ಇದು ಒಪ್ಪಿಗೆ ಮೇಲೆ ನಡೆದಿದೆ. ಅತ್ಯಾಚಾರವಲ್ಲ ಎಂದಿದ್ದರು. ಇದನ್ನು ಮಾನ್ಯ ಮಾಡಿ ಕೋರ್ಟ್ ಆರೋಪಿಯನ್ನು ಬಿಡುಗಡೆ ಮಾಡಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...