alex Certify
ಕನ್ನಡ ದುನಿಯಾ       Mobile App
       

Kannada Duniya

33 ವರ್ಷಗಳ ಹಿಂದೆ ಕೊಚ್ಚಿ ಹೋಗಿದ್ದ ಬೀಚ್ ಮತ್ತೆ ಪ್ರತ್ಯಕ್ಷ

achill-island-reuters_650x400_61494298667

ಐರ್ಲೆಂಡ್ ನ ಪಶ್ಚಿಮ ಕರಾವಳಿಯಲ್ಲಿರುವ ದ್ವೀಪವೊಂದರಲ್ಲಿ 33 ವರ್ಷಗಳ ಹಿಂದೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಬೀಚ್ ಈಗ ಮತ್ತೆ ಪ್ರತ್ಯಕ್ಷವಾಗಿದೆ. ಅಚಿಲ್ ದ್ವೀಪದ ಬಳಿ ಇದ್ದ 300 ಮೀಟರ್ ವಿಸ್ತಾರವಾದ ಈ ಬೀಚ್ 1984ರಲ್ಲಿ ಬಿರುಗಾಳಿಯ ಹೊಡೆತಕ್ಕೆ ನೀರುಪಾಲಾಗಿತ್ತು.

ಆದ್ರೀಗ ಅಟ್ಲಾಂಟಿಕ್ ಸಾಗರ ಮತ್ತೆ ಮರಳನ್ನೆಲ್ಲ ವಾಪಸ್ ತಂದಿದೆ. ಕಳೆದು ಹೋಗಿದ್ದ ಬೀಚ್ ಮರುಸೃಷ್ಟಿಯಾಗಿದೆ. ಈ ಬೀಚ್ ನಲ್ಲಿ 4 ಹೋಟೆಲ್ ಗಳು, ಹತ್ತಾರು ಗೆಸ್ಟ್ ಹೌಸ್ ಗಳಿದ್ವು. ಸುಮಾರು 2,600 ಜನರು ಇಲ್ಲೇ ವಾಸಿಸುತ್ತಿದ್ರು. ಆದ್ರೆ ಚಂಡಮಾರುತದ ಹೊಡೆತಕ್ಕೆ ಎಲ್ಲವೂ ನಾಮಾವಶೇಷವಾಗಿ ಹೋಗಿತ್ತು.

ಇದೀಗ ಮತ್ತೆ ಬೀಚ್ ಸೃಷ್ಟಿಯಾಗಿರೋದು ಜನರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಅಚ್ಚರಿಯನ್ನು ನೋಡಲು ಪ್ರವಾಸಿಗರು ಕೂಡ ತಂಡೋಪತಂಡವಾಗಿ ಬರುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...