alex Certify
ಕನ್ನಡ ದುನಿಯಾ       Mobile App
       

Kannada Duniya

‘ಗೋಡೆ’ ಮೂಲಕ ಐಸಿಸ್ ಉಗ್ರರ ನಿಯಂತ್ರಣಕ್ಕೆ ಮುಂದಾದ ಇರಾಕ್

635901061323062879-AFP-548496290

ಇರಾಕ್ ನಲ್ಲಿ ಐಸಿಸ್ ಉಗ್ರರ ಅಟ್ಟಹಾಸ ಹೆಚ್ಚುತ್ತಿದ್ದು, ಉಗ್ರರ ಉಪಟಳದಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಬಾಗ್ದಾದ್ ಸುತ್ತಲೂ ತಡೆಗೋಡೆ ಮತ್ತು ಕಂದಕ ನಿರ್ಮಿಸಲು ಇರಾಕ್ ಸರ್ಕಾರ ಮುಂದಾಗಿದೆ.

ಹೌದು. ಈಗಾಗಲೇ ಐಸಿಸ್ ಉಗ್ರರ ದಾಳಿಗೆ ಇರಾಕ್ ನ ಹಲವು ಪ್ರದೇಶಗಳು ನಲುಗಿದ್ದು, ಪ್ರತಿದಿನ ಅಲ್ಲಲ್ಲಿ ಬಾಂಬ್ ಸ್ಪೋಟಗಳು ನಡೆಯುತ್ತಿವೆ. ಹಾಗಾಗಿ ಬಾಗ್ದಾದ್​ ನೊಳಗೆ ನುಸುಳುವ ಉಗ್ರರ ಪ್ರಯತ್ನಕ್ಕೆ ತಡೆ ಒಡ್ಡುವ ಸಲುವಾಗಿ ಚೆಕ್​ ಪೋಸ್ಟ್ ​ಗಳನ್ನು ಸ್ಥಾಪಿಸಲಾಗಿದ್ದು, ಆದರೂ ದಾಳಿಗಳು ನಿಲ್ಲುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಬಾಗ್ದಾದ್ ಸುತ್ತಲೂ ಸುಮಾರು 100 ಕಿ.ಮೀ. ಉದ್ದದ ತಡೆಗೋಡೆ ಮತ್ತು ಕಂದಕ ನಿರ್ಮಿಸಲು ಇರಾಕ್ ಸರ್ಕಾರ ಚಿಂತನೆ ನಡೆಸಿದ್ದು, ನಗರದ ಕೇಂದ್ರ ಭಾಗದಿಂದ 30 ಕಿ.ಮೀ. ದೂರದಲ್ಲಿ ನಗರದ ಸುತ್ತಲೂ ತಡೆಗೋಡೆ ನಿರ್ಮಿಸಲಾಗುತ್ತದೆ. ವಿಶೇಷವೆಂದರೆ ಕಾಂಕ್ರಿಟ್ ಇಟ್ಟಿಗೆಗಳ ಮೂಲಕ ನಿರ್ಮಿಸಲಾಗುವ ಈ ಗೋಡೆ 3 ಮೀಟರ್ ದಪ್ಪ ಇರಲಿದ್ದು, ಉಗ್ರರನ್ನು ನಿಯಂತ್ರಿಸಲು ಸುಲಭವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...