alex Certify
ಕನ್ನಡ ದುನಿಯಾ       Mobile App
       

Kannada Duniya

ಮೈ ಮುಚ್ಚದ ಉಡುಪು ಧರಿಸುವ ಮಹಿಳೆಯರಿಗೆ ಕ್ರೂರ ಶಿಕ್ಷೆ

iraq-crisis

ತಮ್ಮ ದುಷ್ಕೃತ್ಯಗಳ ಮೂಲಕ ವಿಶ್ವದ ನೆಮ್ಮದಿಗೆ ಭಂಗ ತಂದಿರುವ ಐಸಿಸ್ ಉಗ್ರರ ಅಟ್ಟಹಾಸ ಮಿತಿಮೀರಿದ್ದು, ಹಲವು ನೀತಿ- ನಿಯಮ ಜಾರಿಗೆ ತಂದು ಹೆಣ್ಣುಮಕ್ಕಳಿಗೆ ಚಿತ್ರ ಹಿಂಸೆ ನೀಡತೊಡಗಿದ್ದಾರೆ. ಇರಾಕ್ ನ ಉತ್ತರ ಭಾಗದ ಮೊಸುಲ್ ನಗರದಲ್ಲಿ ಅವರ ಆಟ ಜೋರಾಗಿದೆ.

ಮಹಿಳೆಯರೇನಾದರೂ ಮೈ ಕಾಣುವ ಬಟ್ಟೆ ಹಾಕಿದರೆ, ಆ ಕಾಣುವ ಭಾಗವನ್ನು ಕೀಳುವ ಐಸಿಸ್ ಉಗ್ರರು, ಇದಕ್ಕಾಗಿ ಉಪಕರಣವೊಂದನ್ನು ಬಳಸುತ್ತಿದ್ದಾರೆ. ‘ಕ್ಲಿಪ್ಪರ್’ ಎಂದು ಹೆಸರಿಸಲಾಗಿರುವ ಈ ಉಪಕರಣವನ್ನು ಬಳಸಿ ಮೈ ಕಾಣುವ ಬಟ್ಟೆ ತೊಟ್ಟಿದ್ದ ಮಹಿಳೆಯರ ಚರ್ಮವನ್ನು ತೆಗೆಯುತ್ತಾರೆ. ಇದು ಎಷ್ಟು ಹರಿತವಾಗಿರುತ್ತದೆ ಎಂದರೆ, ಮಾಂಸವನ್ನೇ ಕತ್ತರಿಸಿ ತೆಗೆಯುತ್ತದೆ. ಹೀಗೆ ಐಸಿಸ್ ಉಗ್ರರ ಕೈಗೆ ಸಿಲುಕಿ ಹಲವು ಮಹಿಳೆಯರು ನರಕಯಾತನೆ ಅನುಭವಿಸಿದ್ದಾರೆ.

ಮೊಸುಲ್ ನಗರದಿಂದ ತಪ್ಪಿಸಿಕೊಂಡು ಸಿರಿಯಾದ ಶಿಬಿರವೊಂದರಲ್ಲಿ ನೆಲೆ ಕಂಡುಕೊಂಡಿರುವ 22 ವರ್ಷದ ಫಾತೀಮಾ ಎಂಬಾಕೆ, ಐಸಿಸ್ ಉಗ್ರರು ಹೇಗೆಲ್ಲಾ ಚಿತ್ರ ಹಿಂಸೆ ನೀಡುತ್ತಾರೆ ಎಂಬುದನ್ನು ತಿಳಿಸಿದ್ದಾರೆ. ಆಕೆಯ ಸಹೋದರಿ ಕೈಗೆ ಗ್ಲೌಸ್ ಹಾಕುವುದನ್ನು ಮರೆತಿದ್ದಕ್ಕೆ ಕ್ಲಿಪ್ಪರ್ ನಿಂದ ಮಾಂಸ ತೆಗೆದಿದ್ದಾರೆ. ಆಕೆ ಅಸಾಧ್ಯ ನೋವಿನಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಐಸಿಸ್ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ಹೆಣ್ಣುಮಕ್ಕಳು ಕೈಕಾಲು ಸೇರಿದಂತೆ ಇಡೀ ದೇಹವನ್ನು ಮುಚ್ಚುವ ಉಡುಪು ಧರಿಸಿರಬೇಕು. ಇಲ್ಲವಾದರೆ, ಕ್ರೂರ ಐಸಿಸ್ ಉಗ್ರರು ಕಾಣುವ ದೇಹದ ಭಾಗದ ಚರ್ಮ, ಮಾಂಸವನ್ನೇ ಕೀಳುತ್ತಾರೆ ಎಂದು ಫಾತೀಮಾ ಅಲ್ಲಿನ ಕ್ರೂರ ಚಿತ್ರಣ ತೆರೆದಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...