alex Certify
ಕನ್ನಡ ದುನಿಯಾ       Mobile App
       

Kannada Duniya

ಬುರ್ಕಾ ಧರಿಸದೆ ಡಾನ್ಸ್ ಮಾಡಿದ್ದಕ್ಕೆ ಇಂಥ ಶಿಕ್ಷೆ…!

ಇರಾನ್ ನಲ್ಲಿ ಮಹಿಳೆಯರಿಗೆ ಸ್ವಇಚ್ಛೆಯಂತೆ ನೃತ್ಯ ಮಾಡಲೂ ಸ್ವಾತಂತ್ರ್ಯವಿಲ್ಲ. ಇತ್ತೀಚಿಗೆ ಯುವತಿಯೊಬ್ಬಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆಯ ಕೋಣೆಯಲ್ಲಿ ನೃತ್ಯ ಮಾಡಿದ ವಿಡಿಯೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದೇ ತಪ್ಪಾಗಿದೆ.

ಯಸ್, ಈ ಘಟನೆ ನಡೆದಿರೋದು ಇರಾನ್ ರಾಜಧಾನಿ ತೆಹ್ರಾನ್ ನಲ್ಲಿ. ಡಾನ್ಸ್ ನಲ್ಲಿ ಆಸಕ್ತಿ ಹೊಂದಿರುವ ಹುಡುಗಿಯೊಬ್ಬಳು ಕೆಲ ಹಾಡಿಗೆ ಹೆಜ್ಜೆ ಹಾಕಿ ಅದ್ರ ವಿಡಿಯೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾಳೆ. ಈ ವಿಡಿಯೋ ನೋಡ್ತಿದ್ದಂತೆ ವೈರಲ್ ಆಗಿದೆ. ವಿಶ್ವದ ಜನರು ಯುವತಿ ಡಾನ್ಸ್ ಮೆಚ್ಚಿಕೊಂಡಿದ್ದಾರೆ. ಆದ್ರೆ ಇರಾನ್ ಪೊಲೀಸ್ ಹಾಗೂ ಆಡಳಿತ ಮಂಡಳಿಗೆ ಮಾತ್ರ ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ.

18 ವರ್ಷದ ಮೆಹೀದ್ ನೃತ್ಯ ವೈರಲ್ ಆದಂತೆ ಆಕೆ ಬಂಧನದ ವಿಷ್ಯ ಕೂಡ ವೈರಲ್ ಆಗಿದೆ. ವಿಶ್ವದ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ರೆ ಪೊಲೀಸರು ಮಾತ್ರ ವಿಚಾರಣೆ ಮುಂದುವರೆಸಿದ್ದಾರೆ. ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಮೆಹೀದ್ ನೃತ್ಯವನ್ನು ಪ್ರಸಾರ ಮಾಡಲಾಗಿದೆಯಂತೆ. ಮೆಹೀದ್ ತಪ್ಪೊಪ್ಪಿಕೊಂಡಿದ್ದಾಳಂತೆ. ಸ್ಥಳೀಯ ಕಾನೂನು ಉಲ್ಲಂಘನೆ ಮಾಡಿರುವುದಾಗಿ ಹೇಳಿದ್ದಾಳಂತೆ. ಬುರ್ಕಾ ಧರಿಸದೆ ನೃತ್ಯ ಮಾಡಿರುವುದು ಸ್ಥಳೀಯ ಕಾನೂನಿನ ಉಲ್ಲಂಘನೆಯಾಗಿದೆ. ಮೆಹೀದ್ ಇನ್ಸ್ಟ್ರಾಗ್ರಾಮ್ ನಲ್ಲಿ 300 ಕ್ಕೂ ಹೆಚ್ಚು ವಿಡಿಯೋಗಳನ್ನು ಹಾಕಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...