alex Certify
ಕನ್ನಡ ದುನಿಯಾ       Mobile App
       

Kannada Duniya

ಇರಾನ್ ಯುವತಿಗೆ ‘ನೋ ಎಂಟ್ರಿ’ ಎಂದ ಅಮೆರಿಕ

woman1_1485699147

ನಜಾನಿನ್ ಜಿನೌರ್ ಪಾಲಿಗೆ ಕಳೆದ 7 ವರ್ಷಗಳಿಂದ ಅಮೆರಿಕವೇ ತವರಾಗಿತ್ತು. ಆದ್ರೆ ಇರಾನ್ ಸೇರಿದಂತೆ 7 ರಾಷ್ಟ್ರಗಳ ಮುಸಲ್ಮಾನರ ಪ್ರವೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಷೇಧ ಹೇರಿರುವುದರಿಂದ ಅವಳ ಬದುಕು ಅನಿರೀಕ್ಷಿತ ತಿರುವು ಪಡೆದಿದೆ. ಕ್ಲೆಮ್ಸನ್ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿರುವ ನಜಾನಿನ್ ಈಗ ನೆಲೆ ಕಳೆದುಕೊಂಡಿದ್ದಾಳೆ.

ಟ್ರಂಪ್ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ತಾರೆ ಅನ್ನೋ ಸುದ್ದಿ ಹಬ್ಬಿದಾಗ ನಜಾನಿನ್ ಪೋಷಕರನ್ನು ಭೇಟಿಯಾಗಲು ಇರಾನ್ ಗೆ ತೆರಳಿದ್ಲು. ಹೊಸ ವಲಸೆ ನೀತಿ ಬಗ್ಗೆ ಕೇಳ್ತಿದ್ದಂತೆ ಕೂಡಲೇ ನೆಕ್ಸ್ಟ್ ಫ್ಲೈಟ್ ಗೆ ಟಿಕೆಟ್ ಬುಕ್ ಮಾಡಿಕೊಂಡು ವಾಷಿಂಗ್ಟನ್ ಗೆ ಹೊರಟು ನಿಂತ್ಲು. ದುಬೈಗೆ ಬಂದಿಳಿಯುವಷ್ಟರಲ್ಲಿ ಟ್ರಂಪ್ ಹೊಸ ನೀತಿಗೆ ಸಹಿ ಮಾಡಿಯಾಗಿತ್ತು.

ದುಬೈ ವಿಮಾನ ನಿಲ್ದಾಣದಲ್ಲಿ ಗಂಟೆಗಟ್ಟಲೆ ದಾಖಲೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಕೊನೆಗೂ ನಜಾನಿನ್ ಗೆ ಅಮೆರಿಕದತ್ತ ಹಾರಲು ಅನುವು ಮಾಡಿಕೊಟ್ರು. ಆದ್ರೆ ವಿಮಾನ ಟೇಕಾಫ್ ಆಗುವಷ್ಟರಲ್ಲಿ ಬಂದ ಟಿಎಸ್ಎ ಅಧಿಕಾರಿಗಳು ಆಕೆಯನ್ನು ಕೆಳಕ್ಕಿಳಿಸಿದ್ದಾರೆ. ಅಮೆರಿಕಕ್ಕೆ ತೆರಳಲು ಅವಕಾಶ ನಿರಾಕರಿಸಿದ್ದಾರೆ.

7 ವರ್ಷ ಕಷ್ಟಪಟ್ಟು ದುಡಿದು ಸಂಪಾದಿಸಿದ್ದ ಕಾರು, ಮನೆ ಹಾಗೂ ಇನ್ನಿತರ ವಸ್ತುಗಳೆಲ್ಲ ಅಮೆರಿಕದಲ್ಲೇ ಇದ್ದು, ಅವೆಲ್ಲದರ ಗತಿಯೇನು ಅಂತಾ ನಜಾನಿನ್ ಆತಂಕ ವ್ಯಕ್ತಪಡಿಸಿದ್ದಾಳೆ. ತನ್ನ ನೋವನ್ನು ಸಾಮಾಜಿಕ ತಾಣದಲ್ಲಿ ತೋಡಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...