alex Certify
ಕನ್ನಡ ದುನಿಯಾ       Mobile App
       

Kannada Duniya

ಐಫೋನ್ ಸ್ಫೋಟದ ತೀವ್ರತೆಗೆ ಹೊತ್ತಿ ಉರಿದ ಬೆಡ್ ರೂಮ್

bedroom

ಐಫೋನ್ ಹಾಗೂ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಮೊಬೈಲ್ ಸ್ಫೋಟಗೊಂಡ ಮಾಹಿತಿ ಆಗಾಗ ಬರ್ತಾನೇ ಇರುತ್ತೆ. ಈ ಅವಘಡಗಳಲ್ಲೆಲ್ಲ ಮೊಬೈಲ್ ಮಾಲೀಕರಿಗೆ ಸಣ್ಣ ಪುಟ್ಟ ಗಾಯ ತೊಂದರೆಗಳಾಗಿವೆ. ಆದ್ರೆ ಚಾರ್ಜ್ ಗೆ ಹಾಕಿದ್ದ ಐಫೋನ್ ಸ್ಫೋಟಗೊಂಡು ಇಡೀ ಕೋಣೆ ಭಸ್ಮವಾಗಿದೆ.

ನಾರ್ತ್ ವೇಲ್ಸ್ ನ 15 ವರ್ಷದ ಬಾಲಕಿ ತನ್ನ ಐಫೋನ್ ಅನ್ನು ಬೆಡ್ ರೂಮಿನಲ್ಲಿ ಚಾರ್ಜಿಂಗ್ ಗೆ ಹಾಕಿದ್ಲು, ಇದ್ದಕ್ಕಿದ್ದಂತೆ ಐಫೋನ್ ಸ್ಫೋಟಿಸಿ ಬೆಂಕಿ ಹೊತ್ತಿಕೊಂಡಿದೆ, ಇಡೀ ಕೋಣೆ ಸುಟ್ಟು ಕರಕಲಾಗಿದ್ದು, ಮನೆಯ ಇತರ ಭಾಗಗಳಿಗೆ ಕೂಡ ಹಾನಿಯಾಗಿದೆ.

ಇಡೀ ಮನೆಯ ತುಂಬ ಹೊಗೆ ಆವರಿಸಿತ್ತು. ಅದೃಷ್ಟವಶಾತ್ ಬೆಂಕಿ ಅನಾಹುತದಲ್ಲಿ ಯಾರೂ ಗಾಯಗೊಂಡಿಲ್ಲ. ಆದ್ರೆ ಮನೆಯಲ್ಲಿದ್ದ ಬಹುತೇಕ ಎಲ್ಲ ವಸ್ತುಗಳಿಗೂ ಹಾನಿಯಾಗಿರೋದಾಗಿ ಬಾಲಕಿಯ ತಾಯಿ ಜೆಮ್ಮಾ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲು ಇದುವರೆಗೂ ಆ್ಯಪಲ್ ಕಂಪನಿ ಮುಂದೆ ಬಂದಿಲ್ಲ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...