alex Certify
ಕನ್ನಡ ದುನಿಯಾ       Mobile App
       

Kannada Duniya

ವಿಡಿಯೋ ನೋಡಿ ಬೇಸ್ತು ಬಿದ್ರು ಐಫೋನ್ 7 ಗ್ರಾಹಕರು

iPhone 7 users ‘drill hole’ to recreate headphone jackತಮಾಷೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದ ವಿಡಿಯೋ ಒಂದನ್ನು ನೋಡಿದ ಐಫೋನ್ 7 ಹೊಂದಿದ್ದ ಗ್ರಾಹಕರು ಬೇಸ್ತು ಬಿದ್ದಿದ್ದಾರೆ. ವಿಡಿಯೋದಲ್ಲಿ ಹೇಳಿದಂತೆ ಮಾಡಲು ಹೋಗಿ ತಮ್ಮ ದುಬಾರಿ ಬೆಲೆಯ ಐಫೋನ್ ಅನ್ನು ಹಾಳು ಮಾಡಿಕೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ಐಫೋನ್ 7 ಗೆ ಹೆಡ್ ಫೋನ್ ಹಾಕಲು ಸ್ಲಾಟ್ ಇಲ್ಲವೆನ್ನಲಾಗಿದ್ದು, ವೈರ್ ಲೆಸ್ ಏರ್ ಪಾಡ್ ಗಾಗಿ 159 ಡಾಲರ್ ಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕಿತ್ತು. ಹೀಗಾಗಿ TechRax  ಈ ಕುರಿತು ಲೇವಡಿ ಮಾಡಲು  ‘Secret Hack to Get Headphone Jack on the iPhone 7’ ಎಂಬ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದು, ಇದನ್ನು ಈಗಾಗಲೇ 9 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಕೆಲವರು ಈ ವಿಡಿಯೋ ನಿಜವೆಂದು ನಂಬಿ ಹೆಡ್ ಫೋನ್ ಸ್ಲಾಟ್ ಗಾಗಿ ವಿಡಿಯೋದಲ್ಲಿ ತೋರಿಸಿದಂತೆ ತಮ್ಮ ಐಫೋನ್ 7 ಗೆ ಡ್ರಿಲ್ ಮಾಡಿ ಇಂಗು ತಿಂದ ಮಂಗನಂತಾಗಿದ್ದಾರೆ. ಹಲವರ ಫೋನ್ ಗಳು ಹಾಳಾಗಿವೆ. ತಮ್ಮ ಫೋನ್ ಹಾಳಾಗಿದ್ದರಿಂದ ಕೋಪಗೊಂಡ ಕೆಲವರು, ವಿಡಿಯೋ ಅಪ್ ಲೋಡ್ ಮಾಡಿದವನು ಎದುರಿಗೆ ಸಿಕ್ಕರೆ ನಾಲ್ಕು ಇಕ್ಕುವುದಾಗಿ ಬೆದರಿಕೆ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...