alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಸ್ಟೋರ್‌ನಲ್ಲಿ ಸ್ಫೋಟಗೊಂಡ ಐಪ್ಯಾಡ್‌

ನೆದರ್‌ಲ್ಯಾಂಡ್‌ನ ಅಮ್ಸಸ್ಟರ್‌ಡಾಮ್‌ ಪಟ್ಟಣದಲ್ಲಿನ ಆಪಲ್‌ ಸ್ಟೋರ್‌ನಲ್ಲಿ ಆ್ಯಪಲ್‌ ಐಪ್ಯಾಡ್‌ ಸ್ಫೋಟಗೊಂಡಿದೆ. ಅದೃಷ್ಟವಷಾತ್‌ ಸ್ಟೋರ್‌ನಲ್ಲಿದ್ದ ಗ್ರಾಹಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಐಪ್ಯಾಡ್‌ ಸ್ಫೋಟಗೊಂಡ ತಕ್ಷಣ ಸಿಬ್ಬಂದಿ ಅದನ್ನು ಮರಳಿನ ಪೆಟ್ಟಿಗೆಗೆ ಹಾಕಿದ್ದರಿಂದ ಇನ್ನಷ್ಟು ಅಪಾಯ ತಪ್ಪಿಹೋಗಿದೆ. ಬ್ಯಾಟರಿ ಹೆಚ್ಚು ಚಾರ್ಜ್‌ ಆಗಿರುವುದು ಅಥವಾ ಬ್ಯಾಟರಿಯಲ್ಲಿ ಲೀಕೇಜ್‌ ಇರುವುದು ಸ್ಫೋಟಕ್ಕೆ ಕಾರಣ ಎಂದು ತಿಳಿದು ಬಂದಿದೆ. ಘಟನೆ ವೇಳೆ ಸ್ಟೋರ್‌ ತುಂಬ ಹೊಗೆ ತುಂಬಿಕೊಂಡಿದ್ದು, ತಕ್ಷಣ ಎಲ್ಲರನ್ನೂ ಹೊರಕ್ಕೆ ಕಳಿಸಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿದ್ದು, ಅಪಾಯಕಾರಿ ಹೊಗೆ ಸ್ಟೋರ್‌ ಒಳಗೆ ತುಂಬಿಕೊಂಡಿತ್ತು. ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2018ರ ಜನವರಿಯಲ್ಲಿ ಐಪಾಡ್‌ ರಿಪೇರಿ ಮಾಡುತ್ತಿದ್ದ ವೇಳೆ ಸ್ಫೊಟಗೊಂಡಿತ್ತು. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದ. 2016ರಲ್ಲಿ ಹೊಸ ಐಫೋನ್‌ 7 ಕಾರಿನಲ್ಲಿ ಸ್ಪೋಟಗೊಂಡಿತ್ತು. ಇದೇ ರೀತಿಯಲ್ಲಿ ಮತ್ತೊಂದು ಐಪೋನ್‌ 7 ಸ್ಫೋಟಗೊಂಡ ಪ್ರಕರಣ ದಾಖಲಾಗಿತ್ತು. ಲೀಥಿಯಂ ಬ್ಯಾಟರಿಗಳನ್ನು ಹೆಚ್ಚು ಚಾರ್ಜ್‌ ಮಾಡುವುದರಿಂದ ತಾಪಮಾನ ಹೆಚ್ಚಾಗಿ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...