alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ನೆಟ್ ನಲ್ಲಿ ಗಮನ ಸೆಳೆಯುತ್ತಿದೆ ಈಕೆಯ ಕಾಲ್ಬೆರಳು

toe1ಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವ ಯುವತಿಯೊಬ್ಬಳ ಕಾಲ್ಬೆರಳಿನ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ತೈವಾನ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆಂದೇ ಮೀಸಲಾಗಿರುವ Dcard ಎಂಬ ಬ್ಲಾಗ್ ನಲ್ಲಿ ಈ ಫೋಟೋ ಹಾಕಿದ್ದು, ಅದೀಗ ಇತರೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.

ಈ ಯುವತಿಯ ಕಾಲ್ಬೆರಳುಗಳು ವಿಭಿನ್ನವಾಗಿದ್ದು, ಹೆಬ್ಬೆರಳಿಗಿಂತ ಅದರ ಪಕ್ಕದ ಬೆರಳು ಉದ್ದವಾಗಿದೆ. ಈ ಬೆರಳು ಸುಮಾರು 5 ಸೆಂಟಿಮೀಟರ್ ನಷ್ಟು ಉದ್ದವಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ತನ್ನ ಪೋಷಕರ ಕಾಲ್ಬೆರಳುಗಳು ಸಹ ಇದೇ ರೀತಿ ಇದೆ ಎಂದಿದ್ದಾಳೆ ಯುವತಿ.

ಅಲ್ಲದೇ ಈ ರೀತಿಯಿರುವುದು ಸೌಂದರ್ಯದ ಪ್ರತೀಕವೆಂದು ಭಾವಿಸುತ್ತೇನೆ ಎಂದು ಹೆಮ್ಮೆ ವ್ಯಕ್ತಪಡಿಸಿರುವ ಯುವತಿ, ಬಾಲ್ಯದಿಂದಲೂ ತಾನು ಈ ಕಾರಣಕ್ಕೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದೆ ಎಂದು ಹೇಳಿಕೊಂಡಿದ್ದಾಳೆ. ತನ್ನ ಬೆರಳುಗಳು ಈ ರೀತಿ ಇರುವುದರಿಂದ ಕೆಲವೊಂದು ಅನುಕೂಲತೆಯೂ ನನಗಿದೆ ಎಂದು ಹೇಳುತ್ತಾಳೆ ಆಕೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...