alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದಾದ್ಯಂತ ಯೋಗದ ರಂಗು

germany_yoga_750_1498011403_749x421

ಅಂತರಾಷ್ಟ್ರೀಯ ಯೋಗ ದಿನದ ಮೂರನೇ ವರ್ಷಾಚರಣೆಯನ್ನು ವಿಶ್ವದಾದ್ಯಂತ ಸಂಭ್ರಮದಿಂದ ಆಚರಿಸಲಾಗ್ತಾ ಇದೆ. ಭಾರತ ಸೇರಿ 150ಕ್ಕೂ ಹೆಚ್ಚು ದೇಶಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಪ್ಯಾರಿಸ್ ನ ಐಪಲ್ ಟವರ್, ಲಂಡನ್, ನ್ಯೂಯಾರ್ಕ್ ನ ಸೆಂಟ್ರಲ್ ಪಾರ್ಕ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕೂಡ ಯೋಗ ದಿನವನ್ನು ಆಚರಿಸಲಾಗಿದೆ. ದುಬೈ, ಪೆರು, ಕಠ್ಮಂಡು, ನ್ಯೂಯಾರ್ಕ್ ಸೇರಿದಂತೆ ವಿಶ್ವದ ಹೆಸರುವಾಸಿ ನಗರಗಳಲ್ಲಿ ಆಯೋಜಿಸಲಾಗಿದ್ದ ಯೋಗ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ನ ಅನೇಕ ನಗರಗಳಲ್ಲಿ ಶ್ರದ್ಧೆಯಿಂದ ಯೋಗ ಮಾಡಲಾಗಿದೆ. ಅಬುದಾಬಿ, ಶಾರ್ಜಾ, ದುಬೈನಲ್ಲಿ ಅಪಾರ ಪ್ರಮಾಣದಲ್ಲಿ ಜನರು ಯೋಗ ಮಾಡಿದ್ದಾರೆ. ಅಬುದಾಬಿಯಲ್ಲಿ ಸಾಂಸ್ಕೃತಿಕ ವ್ಯವಹಾರಗಳ ಸಚಿವರು ಯೋಗ ದಿವಸವನ್ನುದ್ದೇಶಿ ಮಾತನಾಡಿದ್ರು. ವಿಶ್ವಕ್ಕೆ ಭಾರತಕೊಟ್ಟ ಉಡುಗೊರೆ ಯೋಗ ಎಂದ್ರು.

ದುಬೈನ ಬುರ್ಜ್ ಖಲೀಫಾ ಪಾರ್ಕ್ ನಲ್ಲಿಯೂ ಯೋಗ ದಿನ ಆಚರಿಸಲಾಯ್ತು. ಅಮೆರಿಕಾ ಹಾಗೂ ಚೀನಾದಲ್ಲಿ ಆಯೋಜಿಸಲಾಗಿದ್ದ ಯೋಗ ಕಾರ್ಯಕ್ರಮಕ್ಕೆ ಬಹು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಜನರು ನಿಷ್ಠೆಯಿಂದ ಯೋಗ ಮಾಡಿದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...