alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರನ ಭೀಕರ ಹತ್ಯೆ

footbal

ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರ ಅಮಿಲ್ಕರ್ ಹೆನ್ಸಿಕ್ಸ್ ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪನಾಮಾ ನಗರದ ಕೊಲೊನ್ ಪ್ರದೇಶದಲ್ಲಿ ಈ ಕೃತ್ಯ ನಡೆದಿದೆ. 33 ವರ್ಷದ ಅಮಿಲ್ಕರ್ ಮಿಡ್ ಫೀಲ್ಡರ್ ಆಗಿದ್ರು.

ಶನಿವಾರ ಮನೆಯಿಂದ ಹೊರಬೀಳ್ತಿದ್ದಂತೆ ಬಂಧೂಕುಧಾರಿಯೊಬ್ಬ ಅವರ ಮೇಲೆ ಗುಂಡಿನ ಮಳೆಗರೆದಿದ್ದಾನೆ. ಇನ್ನಿಬ್ಬರಿಗೆ ಕೂಡ ಗುಂಡು ತಗುಲಿದ್ದು ಗಾಯಗೊಂಡಿದ್ದಾರೆ. ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಅಮಿಲ್ಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಘಟನೆಯನ್ನು ಖಂಡಿಸಿರುವ ಅಧ್ಯಕ್ಷ ಜುವಾನ್ ಕಾರ್ಲೊಸ್ ವರೆಲಾ, ಆದಷ್ಟು ಬೇಗ ಹಂತಕರನ್ನು ಪತ್ತೆ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ರಷ್ಯಾದಲ್ಲಿ ನಡೆಯಲಿರುವ 2018ರ ವಿಶ್ವಕಪ್ ನ ಎಲಿಮಿನೇಟರಿ ಸುತ್ತಿನಲ್ಲಿ ಪನಾಮಾ ಅಂತರಾಷ್ಟ್ರೀಯ ತಂಡದ ಪರ ಅಮಿಲ್ಕರ್ ಆಡಿದ್ದರು. ಯುನೈಟೆಡ್ ಸ್ಟೇಟ್ಸ್ ಜೊತೆಗಿನ ಆ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...