alex Certify
ಕನ್ನಡ ದುನಿಯಾ       Mobile App
       

Kannada Duniya

ಥೈಲ್ಯಾಂಡ್ ರಂಗೀನ್ ದುನಿಯಾ ಹಿಂದೆ ಕರಾಳ ಕಥೆ

thailand-1

ಥೈಲ್ಯಾಂಡ್ ಹಾಗೂ ಅದರ ರಾಜಧಾನಿ ಬ್ಯಾಂಕಾಕ್  ಗುರುತು ಬದಲಾಗಿದೆ. ಲೈಂಗಿಕ ಪ್ರವಾಸಿ ಸ್ಥಳ ಎಂದೇ ಇತ್ತೀಚೆಗೆ ಹೆಸರು ಪಡೆಯುತ್ತಿದೆ. ಥೈಲ್ಯಾಂಡ್ ಕಾನೂನಿನಲ್ಲಿ ವೇಶ್ಯಾವಾಟಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದ್ರೆ ಈ ಕಾನೂನು ಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆ. ಥೈಲ್ಯಾಂಡ್ ನಲ್ಲಿ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆ ಸುಮಾರು ಒಂದು ಲಕ್ಷ 23 ಸಾವಿರ ದಾಟಿದೆ.

ಜಗತ್ತಿನಲ್ಲಿರುವ ಹಣವಂತರು ಮೋಜಿಗಾಗಿ ಥೈಲ್ಯಾಂಡ್ ಗೆ ಹೋಗ್ತಾರೆ. ಬಣ್ಣಗಳಿಂದ ಮಿಂಚುವ ಲೈಂಗಿಕ ಕಾರ್ಯಕರ್ತೆಯರ ಮುಖ ಬಿಟ್ಟರೆ ಅವರ ನೋವು ಪ್ರವಾಸಿಗರಿಗೆ ತಿಳಿಯುವುದಿಲ್ಲ. ಥೈಲ್ಯಾಂಡ್ ನ ಪಟ್ಟಾಯ ಮತ್ತು ಬ್ಯಾಂಕಾಕ್ ನ ಬಾರ್ ಗರ್ಲ್ಸ್, ಬಾಡಿ ಮಸಾಜ್ ಮಾಡುವವರು, ಕ್ಯಾಸಿನೊ ಹಾಗೂ ಸೆಕ್ಸ್ ವರ್ಕರ್ಸ್ ಥಳಕು ಬಳಕಿನಲ್ಲಿ ಅವರ ನೋವು ಕಾಣುವುದಿಲ್ಲ.

ಥೈಲ್ಯಾಂಡ್ ನ ನೂತನ ಪ್ರವಾಸೋದ್ಯಮ ಸಚಿವರು ದೇಶದ ಹೆಸರು ಹಾಳು ಮಾಡುತ್ತಿರುವ ವೇಶ್ಯಾವಾಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಆದೇಶ ಹೊರಡಿಸಿದ್ದಾರೆ. ಆದ್ರೆ ಇದನ್ನು ಲೈಂಗಿಕ ಕಾರ್ಯಕರ್ತೆಯರು ವಿರೋಧಿಸಿದ್ದಾರೆ. ಕೆಲಸ ಮಾಡದಿದ್ದರೆ ಕುಟುಂಬಸ್ಥರು ಉಪವಾಸ ಇರಬೇಕಾಗುತ್ತದೆ ಎಂಬುದು ಕಾರ್ಯಕರ್ತೆಯರ ವಾದವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...