alex Certify
ಕನ್ನಡ ದುನಿಯಾ       Mobile App
       

Kannada Duniya

ತಾನೇ ಸೆಲ್ಫಿ ಕ್ಲಿಕ್ಕಿಸಿಕೊಂಡ ಕೋತಿಗೆ ಸಿಕ್ಕಿದೆ ‘ಪ್ರಶಸ್ತಿ’

ಈಗ ಸೆಲ್ಫಿ ಕ್ರೇಝ್ ಎಷ್ಟಿದೆ ಅಂದ್ರೆ ಮಂಗಗಳು ಕೂಡ ತಮ್ಮ ಫೋಟೋ ಕ್ಲಿಕ್ಕಿಸಿಕೊಳ್ಳಲು ಶುರು ಮಾಡಿವೆ. ಇಂಡೋನೇಷ್ಯಾದ ಮಂಗವೊಂದು ಹಲ್ಲು ಕಿಸಿಯುತ್ತ ತನ್ನ ಸೆಲ್ಫಿ ತೆಗೆದುಕೊಂಡಿತ್ತು. ಆ ಕೋತಿಗೆ ಈಗ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಲಾಗಿದೆ.

ನರುಟೊ ಎಂಬ ಈ ಮಂಗವನ್ನು PETA ಸಂಸ್ಥೆ, ಪರ್ಸನ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಸುಲಾವೆಸಿ ದ್ವೀಪಕ್ಕೆ ಭೇಟಿ ನೀಡಿದ್ದ ಬ್ರಿಟನ್ ನ ಡೇವಿಟ್ ಸ್ಲೇಟರ್ ಎಂಬ ಛಾಯಾಗ್ರಾಹಕನ ಕ್ಯಾಮರಾದತ್ತ ನೋಡಿಕೊಂಡು ಹಲ್ಲು ಕಿಸಿಯುತ್ತ ಕೋತಿ ತಾನೇ ಫೋಟೋ ಕ್ಲಿಕ್ಕಿಸಿತ್ತು.

ಈ ಫೋಟೋ ವೈರಲ್ ಆಗಿತ್ತು. 6 ವರ್ಷದ ನರುಟೊ ಈ ಫೋಟೋದ ಮಾಲೀಕನೆಂದು ಘೋಷಿಸಬೇಕೆಂದು PETA ಒತ್ತಾಯಿಸಿತ್ತು. ಈ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಪ್ರಾಣಿಗಳು ಕೂಡ ಯಾವುದೇ ಆಸ್ತಿಯ ಮಾಲೀಕತ್ವ ಪಡೆಯಬಹುದೋ ಇಲ್ಲವೋ ಎಂಬ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಕಾನೂನು ಹೋರಾಟದ ಬಳಿಕ ಕೋತಿಯ ಈ ಫೋಟೋದಿಂದ ಬಂದ ಆದಾಯದಲ್ಲಿ ಶೇ.25ರಷ್ಟು ಪಾಲನ್ನು ಅದಕ್ಕೇ ನೀಡುವುದಾಗಿ ಛಾಯಾಗ್ರಾಹಕ ಸಮ್ಮತಿಸಿದ್ದ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...