alex Certify
ಕನ್ನಡ ದುನಿಯಾ       Mobile App
       

Kannada Duniya

49 ದಿನಗಳ ಕಾಲ ಸಮುದ್ರದಲ್ಲಿ ಹೋರಾಡಿದ ಯುವಕ ಕೊನೆಗೂ ಬದುಕಿ ಬಂದ

ಕೆಲ ವರ್ಷಗಳ ಹಿಂದೆ ಬಂದ ಲೈಫ್ ಆಫ್ ಪೈ ಚಿತ್ರ ಎಲ್ಲರಿಗೂ ಗೊತ್ತು. ಸಮುದ್ರದಲ್ಲಿ ಸಿಕ್ಕಿ ಬೀಳುವ ಬಾಲಕನೊಬ್ಬ ಜೀವನ್ಮರಣದ ಮಧ್ಯೆ ಹೋರಾಡಿ ಗೆದ್ದು ಬರ್ತಾನೆ. ಅದು ಚಿತ್ರವಾಗಿತ್ತು. ಆದ್ರೆ ರಿಯಲ್ ಲೈಫ್ ನಲ್ಲಿಯೂ ಇಂಥಹದ್ದೇ ಘಟನೆ ನಡೆದಿದೆ.

ಇಂಡೋನೇಷ್ಯಾದಲ್ಲಿ 19 ವರ್ಷದ ಯುವಕನ ಕಥೆಯೊಂದು ಚಿತ್ರದಂತೆ ಇದೆ. ಅಲ್ಡಿ ನಾವೆಲ್ ಅಡಾಲೋಂಗ್ ಒಂದಲ್ಲ ಎರಡಲ್ಲ 49 ದಿನಗಳ ಕಾಲ ಸಮುದ್ರದಲ್ಲಿ ಫಿಶಿಂಗ್ ಹಟ್ ಒಂದರಲ್ಲಿ ಸಿಕ್ಕಿಬಿದ್ದಿದ್ದ. 49 ದಿನಗಳ ನಂತ್ರ ರಕ್ಷಣಾ ಸಿಬ್ಬಂದಿ ಆತನನ್ನು ರಕ್ಷಿಸಿದ್ದಾರೆ.

ನಾವೆಲ್ ಇಂಡೋನೇಷ್ಯಾ ನಿವಾಸಿಯಾಗಿದ್ದಾನೆ. ಮೀನುಗಾರಿಗೆ ದೋಣಿಯಲ್ಲಿ ಲ್ಯಾಂಪ್ ಕೀಪರ್ ಆಗಿ ಕೆಲಸ ಮಾಡ್ತಿದ್ದಾನೆ. ಸ್ಥಳೀಯ ಭಾಷೆಯಲ್ಲಿ ಅದನ್ನು ರೋಮ್ಪೋಂಗ್ ಎಂದು ಕರೆಯುತ್ತಾರೆ. ಸಮುದ್ರದ 125 ಕಿ.ಮೀ.ಯೊಳಗೆ ನಾವೆಲ್ ಕೆಲಸ ಮಾಡ್ತಿದ್ದ. ಸಮುದ್ರದೊಳಗೆ ದೀಪವನ್ನು ಹಚ್ಚಲಾಗುತ್ತದೆ. ಈ ದೀಪ ಮೀನುಗಳನ್ನು ಆಕರ್ಷಿಸುತ್ತದೆ. ಮೀನು ದೀಪದ ಬಳಿ ಬರ್ತಿದ್ದಂತೆ ಅದನ್ನು ಹಿಡಿಯಲಾಗುತ್ತದೆ.

ನಾವೆಲ್ 16ನೇ ವಯಸ್ಸಿನಿಂದಲೇ ಈ ಕೆಲಸ ಶುರು ಮಾಡಿದ್ದ. 15 ದಿನಕ್ಕೆ ಕಂಪನಿಯ ವ್ಯಕ್ತಿಗಳು ನಾವೆಲ್ ಮನೆಗೆ ಬಂದು ಮೀನು ನೀಡಿ ಆಹಾರ, ನೀರಿನ ಬಾಟಲಿ ತೆಗೆದುಕೊಂಡು ಹೋಗ್ತಿದ್ದರಂತೆ. ಕಂಪನಿ ಅಲ್ಲಿನ ಉದ್ಯೋಗಿಗಳಿಗಾಗಿ ಸಮುದ್ರಲ್ಲಿ 50ಕ್ಕೂ ಹೆಚ್ಚು ತೇಲುವ ಹಟ್ ತಯಾರಿಸಿದೆ.

49 ದಿನಗಳ ಹಿಂದೆ ನಾವೆಲ್ ಇದ್ದ ತೇಲುವ ಹಟ್ ಹಗ್ಗ ತಪ್ಪಿದೆ. ಇದ್ರಿಂದ ನಾವೆಲ್ ಸಮುದ್ರದ ಪಾಲಾಗಿದ್ದಾನೆ. ಆತನ ಬಳಿ ಕೆಲ ದಿನಕ್ಕಾಗುವಷ್ಟು ಮಾತ್ರ ಆಹಾರವಿತ್ತಂತೆ. ನಂತ್ರ ಮೀನುಗಳನ್ನು ಹಿಡಿದು ತಿನ್ನುತ್ತಿದ್ದನಂತೆ. ದೊಡ್ಡ ಸಮಸ್ಯೆಯಾಗಿದ್ದು ನೀರು. ಬಟ್ಟೆಯಲ್ಲಿ ನೀರು ಸೋಸಿ ಕುಡಿಯುತ್ತಿದ್ದನಂತೆ.ಇತ್ತ ನಾವೆಲ್ ಪತ್ತೆ ಕಾರ್ಯ ನಡೆಯುತ್ತಿತ್ತು. ಕೊನೆಗೂ ರಕ್ಷಣಾ ಪಡೆ ಕೈಗೆ ನಾವೆಲ್ ಸಿಕ್ಕಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...