alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಪೊಲೀಸ್ ನೇಮಕಾತಿ ವೇಳೆ ಕನ್ಯತ್ವ ಪರೀಕ್ಷೆ…!

ಮಹಿಳಾ ಸಬಲೀಕರಣ, ಮಹಿಳಾ ಸಮಾನತೆ, ಮಹಿಳಾ ಹಕ್ಕುಗಳ ಬಗ್ಗೆ ಹೋರಾಟ ನಡೆಯುತ್ತಿರುವ ಇಂದಿನ ಕಾಲದಲ್ಲೂ ಸಮಾಜದ ಸಂಕುಚಿತ ಮನೋಭಾವಗಳು ಮಾತ್ರ ಹಾಗೇ ಉಳಿದಿವೆ ಎಂಬುದಕ್ಕೆ ಇಂಡೋನೇಶ್ಯಾದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ.

ಅಲ್ಲಿ ಮಹಿಳಾ ಪೊಲೀಸ್ ನೇಮಕಾತಿ ಸಂದರ್ಭ ಕನ್ಯತ್ವ ಪರೀಕ್ಷಿಸಿರುವ ಘಟನೆ ನಡೆದಿದೆ. ಅದರಲ್ಲೂ ಅತ್ಯಂತ ಅಮಾನವೀಯ ಎಂದೇ ಪರಿಣಿಸಲ್ಪಟ್ಟಿರುವ ಟೂ ಫಿಂಗರ್ ಟೆಸ್ಟ್ ನಡೆಸಿ ಯುವತಿಯ ಕನ್ಯಾಪೊರೆ ಹರಿದಿದೆಯೋ ಇಲ್ಲವೋ ಎಂಬುದನ್ನೂ ಪರೀಕ್ಷಿಸಲಾಗಿದೆಯಂತೆ.

ಆಕ್ಟಿವ್ ಸೆಕ್ಸ್ ಲೈಫ್ ಹೊಂದಿರುವ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಸಮಾಜ ಒಪ್ಪಿಕೊಳ್ಳುವುದಿಲ್ಲ ಎಂಬುದು ಇಂಡೋನೇಶ್ಯನ್ ಪೊಲೀಸ್ ಇಲಾಖೆಯ ಬಲವಾದ ನಂಬಿಕೆಯಂತೆ. ಇದಕ್ಕಾಗಿಯೇ ಇಷ್ಟೆಲ್ಲಾ ಕಸರತ್ತುಗಳನ್ನು ನಡೆಸಲಾಗಿದೆ.

ಇದೇ ವೇಳೆ ಪರೀಕ್ಷೆಯಲ್ಲಿ ಫೇಲಾಗಿದ್ದ ಯುವತಿಯೊಬ್ಬಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದು ನಿಜಕ್ಕೂ ನೋವಿನಿಂದ ಕೂಡಿತ್ತು. ಸಣ್ಣಂದಿನಿಂದಲೂ ಅಥ್ಲೀಟ್ ಆಗಿರುವ ನಾನು ಮಾರ್ಷಲ್ ಆರ್ಟ್ ಅನ್ನೂ ಕಲಿಯುತ್ತಿದ್ದೇನೆ. ಈ ಕಾರಣಕ್ಕಾಗಿ ನನ್ನ ಕನ್ಯಾಪೊರೆ ಹರಿದಿರಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ ಇಂತಹ ಕೆಲವು ಸಂಗತಿಗಳು ಲೈಂಗಿಕ ದೌರ್ಜನ್ಯ ಹೆಚ್ಚಲು ಕಾರಣವಾಗುತ್ತಿವೆ ಎಂದು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...