alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪತ್ನಿಗೆ ಪರಿಹಾರ ನೀಡಲು 10,000 ಡಾಲರ್ ನಾಣ್ಯ ತಂದ ಪುಣ್ಯಾತ್ಮ

ಇಂಡೋನೇಷ್ಯಾದಲ್ಲಿ ಪತಿಯೊಬ್ಬ ಮಾಡಿದ ಕೆಲಸ ಚರ್ಚೆಗೆ ಕಾರಣವಾಗಿದೆ. ಕೂಲಿಯಾಗಿ ಕೆಲಸ ಮಾಡ್ತಿರುವ ವ್ಯಕ್ತಿ ಮಾಜಿ ಪತ್ನಿಗೆ ಪರಿಹಾರವಾಗಿ ನೀಡಲು 10,000 ಡಾಲರ್ ನಾಣ್ಯವನ್ನು ಕೋರ್ಟ್ ಗೆ ತೆಗೆದುಕೊಂಡು ಬಂದಿದ್ದಾನೆ.

ಕೆಲ ದಿನಗಳಿಂದ ಪತ್ನಿಗೆ ಪರಿಹಾರ ಭತ್ಯೆ ನೀಡಿರಲಿಲ್ಲ. ಇದು ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಗೆ 10,000 ಡಾಲರ್ ನಾಣ್ಯವನ್ನು ಹೊತ್ತು ತಂದಿದ್ದಾನೆ ಪುಣ್ಯಾತ್ಮ. ಅದು 890 ಕೆ.ಜಿ ತೂಕವಿದೆ ಎಂದು ವಕೀಲರು ಹೇಳಿದ್ದಾರೆ.

ಕೋರ್ಟ್ ನಲ್ಲಿ ಪತಿ-ಪತ್ನಿ ಮಧ್ಯೆ ಜಗಳ ನಡೆದಿದೆ. ಮಾಜಿ ಪತ್ನಿ ಪರ ವಕೀಲರು ನಾಣ್ಯ ಎಣಿಸಲು ನಿರಾಕರಿಸಿದ್ದಾರೆ. ಮಹಿಳೆಗೆ ಅವಮಾನ ಮಾಡಲು ವ್ಯಕ್ತಿ ಈ ರೀತಿ ನಡೆದುಕೊಳ್ಳುತ್ತಿದ್ದಾನೆಂದು ದೂರಿದ್ದಾರೆ. ಕೋರ್ಟ್ ಹಣವನ್ನು ಪಡೆದಿದ್ದು, ಸಿಬ್ಬಂದಿಗೆ ಲೆಕ್ಕ ಮಾಡುವ ಹೊಣೆ ನೀಡಿದೆ.

ಕೂಲಿ ಕೆಲಸ ಮಾಡ್ತಿರುವ ಆತನ ಸಂಬಳ ತುಂಬಾ ಕಡಿಮೆಯಂತೆ. 9 ವರ್ಷಗಳಿಂದ ಮಾಜಿ ಪತ್ನಿಗೆ ಹಣ ನೀಡಿಲ್ಲವಂತೆ. ಕೋರ್ಟ್ ಸೂಚನೆ ನಂತ್ರ ಸ್ನೇಹಿತರ ಬಳಿ ಸಹಾಯ ಪಡೆದು ಭಿಕ್ಷೆ ಬೇಡಿದ್ದನಂತೆ. ಬಹುತೇಕರು ನಾಣ್ಯ ನೀಡಿದ್ದರು ಎಂದು ವ್ಯಕ್ತಿ ದುಃಖ ತೋಡಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...