alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಬ್ಬಾವಿನ ಹೊಟ್ಟೆಯಲ್ಲಿ ಜೀವಂತ ಸಮಾಧಿಯಾದ ರೈತ

582113-indonesia-29

ಇಂಡೋನೇಷ್ಯಾದಲ್ಲಿ ರೈತನೊಬ್ಬನ ಶವ ದೈತ್ಯ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿದೆ. ಸುಲಾವೆಸಿ ದ್ವೀಪದ ಬಳಿ ಕೃಷಿ ಕಾರ್ಯಕ್ಕೆ ಅಂತಾ ತೆರಳಿದ್ದ 25 ವರ್ಷದ ಅಕ್ಬರ್ ಎಂಬಾತನನ್ನು ಹೆಬ್ಬಾವು ನುಂಗಿಬಿಟ್ಟಿತ್ತು. ಹೆಬ್ಬಾವಿನ ಹೊಟ್ಟೆ ಊದಿಕೊಂಡಿದ್ರಿಂದ ಅದಕ್ಕೆ ಅತ್ತಿಂದಿತ್ತ ಚಲಿಸಲೂ ಆಗದೆ ಅರೆಪ್ರಜ್ಞಾವಸ್ಥೆ ತಲುಪಿತ್ತು.

ಇದನ್ನು ಗಮನಿಸಿದ ಗ್ರಾಮಸ್ಥರು ಹೆಬ್ಬಾವಿನ ಹೊಟ್ಟೆಯನ್ನು ಕತ್ತರಿಸಿದ್ದಾರೆ. ಈ ವೇಳೆ ಹೊಟ್ಟೆಯಲ್ಲಿದ್ದ ಅಕ್ಬರ್ ಶವ ಪತ್ತೆಯಾಗಿದೆ. ಭಾನುವಾರ ಕೃಷಿ ಕೆಲಸಕ್ಕೆ ಅಂತಾ ಬಂದಿದ್ದ ಅಕ್ಬರ್ ಮನೆಗೆ ವಾಪಸ್ಸಾಗಿರಲಿಲ್ಲ. ಆತನಿಗಾಗಿ ಕುಟುಂಬದವರು ಶೋಧ ಕಾರ್ಯ ನಡೆಸುತ್ತಿದ್ರು.

ಆದ್ರೆ ಅಕ್ಬರ್ ನನ್ನು ಹೆಬ್ಬಾವು ನುಂಗಿರಬಹುದು ಎಂಬ ಕಲ್ಪನೆ ಕೂಡ ಅವರಿಗೆ ಇರಲಿಲ್ಲ. 7 ಮೀಟರ್ ಉದ್ದದ ಈ ದೈತ್ಯ ಹೆಬ್ಬಾವು ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ನಲ್ಲಿ ಮಾತ್ರ ಹೆಚ್ಚಾಗಿ ಕಾಣಸಿಗುತ್ತದೆ. ಅವು ಮನುಷ್ಯರನ್ನೇ ತಿಂದ ಉದಾಹರಣೆಗಳು ಅತ್ಯಂತ ಕಡಿಮೆ. ಆದ್ರೆ ಅಕ್ಬರ್ ನನ್ನು ಹಾವು ಜೀವಂತವಾಗಿ ನುಂಗಿಬಿಟ್ಟಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...