alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನ ಹೊಟ್ಟೆ ತುಂಬಿಸಲಾಗದೆ ಪರದಾಡ್ತಿದ್ದಾರೆ ಪಾಲಕರು

ಸ್ಥೂಲಕಾಯ ಈಗ ಸಾಮಾನ್ಯ ಸಮಸ್ಯೆಯಾಗಿದೆ. ತೂಕ ಇಳಿಸಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಇಲ್ಲೊಬ್ಬ ಬಾಲಕನಿಗೆ ಸ್ಥೂಲಕಾಯವೇ ಶಾಪವಾಗಿದೆ. ಮಗನ ಹೊಟ್ಟೆ ತುಂಬಿಸಲಾಗದೆ ಪಾಲಕರು ಬಿಕಾರಿಗಳಾಗಿದ್ದಾರೆ.

ಇಂಡೋನೇಷಿಯಾದಲ್ಲಿ ವಾಸವಾಗಿರುವ 10 ವರ್ಷದ ಆಯ್ರಾ ಸೋಮಂತಿ ತೂಕ ಆನೆಗಿಂತಲೂ ಹೆಚ್ಚು. ಬಾಲಕ ಹಗಲಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಆಹಾರ ಸೇವನೆ ಮಾಡ್ತಾನೆ. ರಾತ್ರಿ ಕೂಡ ಈತನಿಗೆ ಆಹಾರ ಬೇಕು. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಲು ಆಯ್ರಾನಿಗೆ ಕಷ್ಟವಾಗುತ್ತದೆ. ಕುಳಿತಲ್ಲಿಂದ ಏಳಲು ತುಂಬಾ ತೊಂದರೆಪಡ್ತಾನೆ ಆಯ್ರಾ.

ಆಯ್ರಾಗೆ ಡಯಟ್ ಶುರುಮಾಡಿದ್ದಾರೆ ಪಾಲಕರು. ಆದ್ರೂ ಆಯ್ರಾ ತೂಕ ಬರೋಬ್ಬರಿ 191 ಕೆ.ಜಿ.ಯಿದೆ. ದಿನಕ್ಕೆ 5 ಕಿಲೋಗ್ರಾಂ ಅನ್ನ ತಿನ್ನುತ್ತಾನೆ. ಐದು ಮಂದಿ ತಿನ್ನುವ ಆಹಾರವನ್ನು ಈತ ತಿನ್ನುವುದ್ರಿಂದ ಯಾವಾಗ ಬೇಕಾದ್ರೂ ಸಾವು ಸಂಭವಿಸಬಹುದೆಂದು ವೈದ್ಯರು ಹೇಳಿದ್ದಾರೆ.

ಹೆಚ್ಚು ತೂಕವಿರುವ ಆಯ್ರಾಗೆ ಬಟ್ಟೆಯೂ ಸಿಗ್ತಾಯಿಲ್ಲ. ತನ್ನ ಕೆಲಸವನ್ನು ಆಯ್ರಾ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಸಿವಾದ ತಕ್ಷಣ ಜೋರಾಗಿ ಅಳುವ ಮಗನಿಗೆ ಆಹಾರ ನೀಡಿ ನೀಡಿ ತಂದೆ- ತಾಯಿ ಸುಸ್ತಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...