alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ ಸಿಟಿಗಳತ್ತ ಚೀನೀ ಹೂಡಿಕೆದಾರರ ಕಣ್ಣು: ತಜ್ಞರು ಏನಂತಾರೆ ಗೊತ್ತಾ…?

ಚೀನಾದ ಕಂಪನಿಗಳು ಭಾರತದ ಸ್ಟಾರ್ಟಪ್‌ ಗಳತ್ತ ಹಾಗೂ ಸರ್ಕಾರದ ಮಹತ್ವಾಕಾಂಕ್ಷಿಯ ಸ್ಮಾರ್ಟ್ ಸಿಟಿ ಮಿಶನ್‌ನತ್ತ ಆಕರ್ಷಿತವಾಗಿವೆ. ಹೂಡಿಕೆದಾರರು, ಕೆಲ ವಿಷಯಗಳ ಕುರಿತು ಜಾಗರೂಕರಾಗಿರಬೇಕೆಂದು ಚೀನಾ ತಜ್ಞರು ಹೇಳಿದ್ದಾರೆ.

ಇತ್ತೀಚೆಗೆ ಬೀಜಿಂಗ್‌ನಲ್ಲಿ ನಡೆದ 2ನೇ ಸ್ಟಾರ್ಟಪ್ ಇಂಡಿಯಾ ಹೂಡಿಕೆ ಸೆಮಿನಾರ್‌ನಲ್ಲಿ ಎಂಟು ಭಾರತೀಯ ಸ್ಟಾರ್ಟಪ್‌ಗಳು 30 ದಶಲಕ್ಷ ಡಾಲರ್ ಬಂಡವಾಳದ ಭರವಸೆಯನ್ನು ಪಡೆದುಕೊಂಡಿವೆ. 20 ಭಾರತೀಯ ಸ್ಟಾರ್ಟಪ್‌ಗಳು ಚೀನಾದ ಅಗ್ರಗಣ್ಯ ಉದ್ದಿಮೆ ಬಂಡವಾಳದಾರರ ಪ್ರತಿನಿಧಿಗಳನ್ನು ಆಕರ್ಷಿಸಲು ಪ್ರಯತ್ನ ಪಟ್ಟಿವೆ.

ಈ ಹಿನ್ನೆಲೆಯಲ್ಲಿ ಗ್ಲೋಬಲ್ ಟೈಮ್ಸ್ ವರದಿಯೊಂದನ್ನು ಪ್ರಕಟಿಸಿ ಚೀನಾ ಕಂಪನಿಗಳಿಗೆ ಭಾರತವು ಪ್ರಮುಖ ಹೂಡಿಕೆ ತಾಣವಾಗುತ್ತಿದೆ ಎಂದು ಹೇಳಿದೆ. ಅದರಲ್ಲಿ ತಜ್ಞರ ಹೇಳಿಕೆಗಳನ್ನು ಉಲ್ಲೇಖಿಸಲಾಗಿದ್ದು, ಸ್ಮಾರ್ಟ್ ಸಿಟಿಗಳು ಹೂಡಿಕೆದಾರರಿಗೆ ಆದಾಯ ತಂದುಕೊಡಬಲ್ಲವು ಎಂಬ ಭರವಸೆ ಹುಟ್ಟಿಸಬೇಕಿದೆ. ಉದ್ಯಮಸ್ನೇಹಿ ವಾತಾವರಣ, ಹೂಡಿಕೆದಾರಸ್ನೇಹಿ ನೀತಿ ಜಾರಿಗೊಳಿಸಬೇಕಾಗಿದೆ ಎಂದು ಹೇಳಿದ್ದಾರೆ.

ಭಾರತ ಸ್ಮಾರ್ಟ್ ಸಿಟಿಗಳನ್ನಾಗಿ ರೂಪಿಸಲು 100 ನಗರಗಳನ್ನು ಆಯ್ಕೆ ಮಾಡಿದ್ದು, 2,05,018 ಕೋಟಿ ರೂ.ನ ಯೋಜನೆ ರೂಪಿಸಿದೆ. 2021ಕ್ಕೆ ಯೋಜನೆ ಪೂರ್ಣಗೊಳ್ಳುವ ಗುರಿ ಹಾಕಿಕೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...